alex Certify ಕೊರೊನಾದಿಂದ ಮೃತಪಟ್ಟ ಪತಿ ಶವದ ಮುಂದೆ ಹಾಡು ಹೇಳಿದ ಪತ್ನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಮೃತಪಟ್ಟ ಪತಿ ಶವದ ಮುಂದೆ ಹಾಡು ಹೇಳಿದ ಪತ್ನಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. 35 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮಂಗಳವಾರ ರಾತ್ರಿ ವ್ಯಕ್ತಿ ಸಾವನ್ನಪ್ಪಿದ್ದು ಅವನ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ.

ಮೃತ ವ್ಯಕ್ತಿ ಪತ್ನಿ ಮೊದಲು ಆಸ್ಪತ್ರೆ ವಿರುದ್ಧ ಆರೋಪ ಮಾಡಿದ್ದಳು. ನಂತ್ರ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂದು ಪತಿ ವಿಡಿಯೋವನ್ನು ಎಲ್ಲರ ಮುಂದಿಟ್ಟಿದ್ದಳು. ಪತಿ ಸಾವನ್ನಪ್ಪಿಲ್ಲ. ನನಗೆ ಆತನ ಬಳಿ ಹೋಗಲು ಬಿಡಿ ಎಂದು ಗೋಳಾಡಿದ ಮಹಿಳೆ ಶವದ ಬಳಿ ಹೋಗಿ ಹಳೆ ದಿನಗಳನ್ನು ನೆನೆದಳು.

ನೀವು ಕೊರೊನಾದಿಂದ ಸಾವನ್ನಪ್ಪಿದ್ದೀರಿ ಎನ್ನುತ್ತಿದ್ದಾರೆ. ಆದ್ರೆ ಕೊರೊನಾದಿಂದ ನೀವು ಸಾವನ್ನಪ್ಪಿಲ್ಲ. ಏಳಿ ಎನ್ನುತ್ತಿದ್ದ ಮಹಿಳೆ ಮೊದಲ ಭೇಟಿಯಲ್ಲಿ ಹಾಡಿದ ಹಾಡನ್ನು ಪತಿ ಶವದ ಮುಂದೆ ಹಾಡಿದ್ದಾಳೆ. ಮಕ್ಕಳ ಜೊತೆ ಆಟವಾಡಿದ್ದ. ನನ್ನ ಜೊತೆ ಊಟ ಮಾಡಿದ್ದ. ನಮಗೆ ಬರದ ಕೊರೊನಾ ಆತನಿಗೆ ಹೇಗೆ ಬಂತು ಎಂದು ಪ್ರಶ್ನೆ ಮಾಡಿದ್ದಾಳೆ. ಆರೋಗ್ಯ ಇಲಾಖೆಗೂ ಇದು ತಲೆನೋವಾಗಿದೆ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಗೆ ಕೊರೊನಾ ಬಂದ ಮೂಲ ಪತ್ತೆಯಾಗ್ತಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...