alex Certify ‘ಕರೋನಾ’ ಸಂಕಷ್ಟದ ನಡುವೆ ಬಹಿರಂಗವಾಯ್ತು ಮತ್ತೊಂದು ಶಾಕಿಂಗ್ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕರೋನಾ’ ಸಂಕಷ್ಟದ ನಡುವೆ ಬಹಿರಂಗವಾಯ್ತು ಮತ್ತೊಂದು ಶಾಕಿಂಗ್ ಸಂಗತಿ

ಚೀನಾದ ವುಹಾನ್ ನಗರದಲ್ಲಿ ಆರಂಭವಾಗಿ ಇದೀಗ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಮಹಾಮಾರಿ ಕರೋನಾ ವೈರಸ್ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ಪಡೆದಿದೆ. ಇದರ ನಿಯಂತ್ರಣಕ್ಕಾಗಿ ವಿಶ್ವದ ಶೇಕಡ 90ರಷ್ಟು ರಾಷ್ಟ್ರಗಳು ಲಾಕ್ ಡೌನ್ ಘೋಷಿಸಿವೆ.

ಇದರ ಜೊತೆಗೆ ಲಕ್ಷಾಂತರ ಸೋಂಕು ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರತದಲ್ಲೂ ಕರೋನಾ ತನ್ನ ಅಬ್ಬರ ಮುಂದುವರೆಸಿದ್ದು, ಈ ಸೋಂಕಿಗೆ ಈವರೆಗೆ 646 ಮಂದಿ ಬಲಿಯಾಗಿದ್ದಾರೆ. 19,000 ಕ್ಕೂ ಅಧಿಕ ಮಂದಿ ಸೋಂಕು ಪೀಡಿತರಾಗಿದ್ದು, ಅವರುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಇದರ ಮಧ್ಯೆ ಶಾಕಿಂಗ್ ಸಂಗತಿಯೊಂದು ಬಹಿರಂಗವಾಗಿದ್ದು, ಕರೋನಾ ಸೋಂಕು ಪೀಡಿತರನ್ನು ಪತ್ತೆ ಹಚ್ಚಲು ಭಾರತಕ್ಕೆ ಚೀನಾ ಪೂರೈಸಿರುವ ರಾಪಿಡ್ ಆಂಟಿಬಾಡಿ ಟೆಸ್ಟ್ ಕಿಟ್ ಗಳು ದೋಷಪೂರಿತವಾಗಿವೆ ಎಂದು ಹೇಳಲಾಗಿದೆ. ಇದರ ಬಳಕೆಯಿಂದ ಫಲಿತಾಂಶದ ನಿಖರತೆ ಶೇ.6 ರಿಂದ ಶೇ.71 ರ ವ್ಯಾಪ್ತಿಯಲ್ಲಿದೆ ಎನ್ನಲಾಗಿದ್ದು ಈ ಹಿನ್ನೆಲೆಯಲ್ಲಿ ಎರಡು ದಿನಗಳ ಮಟ್ಟಿಗೆ ಈ ಕಿಟ್ ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಎಲ್ಲ ರಾಜ್ಯಗಳಿಗೂ ಸೂಚನೆ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...