alex Certify ಈ ಕೆಲಸಕ್ಕೆ ಬಳಕೆಯಾಗ್ತಿತ್ತು ವಿಶಾಖಪಟ್ಟಣಂನಲ್ಲಿ ಸೋರಿಕೆಯಾದ ಅನಿಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕೆಲಸಕ್ಕೆ ಬಳಕೆಯಾಗ್ತಿತ್ತು ವಿಶಾಖಪಟ್ಟಣಂನಲ್ಲಿ ಸೋರಿಕೆಯಾದ ಅನಿಲ

ಆಂಧ್ರಪ್ರದೇಶದ ವಿಶಾಖಪಟ್ಟಣಂನ ಎಲ್ ಜಿ ಪಾಲಿಮರ್ಸ್ ಗ್ಯಾಸ್ ಸೋರಿಕೆ ಪ್ರಕರಣಕ್ಕೆ ಆತಂಕಕ್ಕೆ ಮನೆ ಮಾಡಿದೆ. ಕಂಪನಿಯ ಸುತ್ತಮುತ್ತಲ ಜನರ ಪರಿಸ್ಥಿತಿ ಗಂಭೀರವಾಗಿದ್ದು, ಅವ್ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗಾಗಲೇ 8 ಮಂದಿ ಸಾವನ್ನಪ್ಪಿದ್ದು, ಅನೇಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಯಿ, ಮೂಗಿಗೆ ಒದ್ದೆ ಬಟ್ಟೆ ಧರಿಸಿ ಎಂದು ಸುತ್ತಲ ಗ್ರಾಮದ ಜನರಿಗೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.

ಆರಂಭದ ತನಿಖೆಯಲ್ಲಿ  ಪಿವಿಸಿ, ಸ್ಟೈರೀನ್ ಅನಿಲ ಸೋರಿಕೆಯಾಗಿದೆ ಎಂಬುದು ಪತ್ತೆಯಾಗಿದೆ. Polyvinyl Chloride ಯನ್ನು ಸಾಮಾನ್ಯವಾಗಿ ಕಟ್ಟಡ ಸಾಮಗ್ರಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಪಿವಿಸಿ ಪೈಪ್, ಕಿಟಕಿಗಳ ಚೌಕಟ್ಟುಗಳು, ಬಾಗಿಲುಗಳು ತಯಾರಿಕೆಗೆ ಬಳಸಲಾಗುತ್ತದೆ. ಹೆಚ್ಚಿನ ಬಾಳಿಕೆಗಾಗಿ ಪಿವಿಸಿಯನ್ನು ಬಳಸಲಾಗುತ್ತದೆ.

ಪಿವಿಸಿ ವಿಶ್ವದ ಮೂರನೇ ಅತ್ಯಂತ ವಿಶ್ವಾಸಾರ್ಹ ಪ್ಲಾಸ್ಟಿಕ್ ಉತ್ಪನ್ನವಾಗಿದೆ. ಪಿವಿಸಿ ಅನಿಲದಿಂದಾಗಿ ಕಣ್ಣುಗಳಲ್ಲಿ ತೀವ್ರವಾದ ಉರಿ, ಉಸಿರಾಟದ ತೊಂದರೆ, ತಲೆತಿರುಗುವಿಕೆ ಇತ್ಯಾದಿ ಸಮಸ್ಯೆಯನ್ನುಂಟು ಮಾಡುತ್ತದೆ. ಪಿವಿಸಿ ಹೊಂದಿರುವ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರೂ ತಮ್ಮ ಸೆಕ್ಸ್ ಡ್ರೈವ್ ಕಡಿಮೆಯಾಗಿದೆ ಎಂದು ದೂರಿದ್ದಾರೆ. ಇದು ಮಹಿಳೆಯರ ಮುಟ್ಟಿನ ಅವಧಿ ಮೇಲೂ ಪರಿಣಾಮ ಬೀರುತ್ತದೆ.

ಸ್ಟೈರೀನ್ ಅನಿಲ ಬಣ್ಣರಹಿತ ದ್ರವ. ಇದು ಗಾಳಿಯೊಂದಿಗೆ ಪ್ರಸಾರ ಮಾಡಲು ಪ್ರಾರಂಭಿಸುತ್ತದೆ. ಪ್ಯಾಕೇಜಿಂಗ್ ವಸ್ತುಗಳು, ವಿದ್ಯುತ್ ನಿರೋಧಕ, ಫೈಬರ್ ಗ್ಲಾಸ್, ಪ್ಲಾಸ್ಟಿಕ್ ಕೊಳವೆಗಳು, ವಾಹನ ಭಾಗಗಳು, ಟೀ ಕಪ್ ಗಳು, ರತ್ನಗಂಬಳಿಗಳು ಇತ್ಯಾದಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ಗಾಳಿಯಲ್ಲಿ ಈ ಅನಿಲಗಳು 40 ಗಂಟೆಗಳ ಕಾಲ ಇರುತ್ತೆ ಎನ್ನಲಾಗಿದೆ. ಸದ್ಯ ವಿಶಾಖಪಟ್ಟಣಂ ಸ್ಥಿತಿ ಗಂಭೀರವಾಗಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ಪೀಡಿತರ ಚಿಕಿತ್ಸೆಗೆ ಸಿದ್ಧತೆ ನಡೆದಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...