ಜಾರ್ಖಂಡ್ನ ಧನ್ಬಾದ್ನಲ್ಲಿ ವಿಚಿತ್ರ ಪ್ರಕರಣ ಹೊರಬಿದ್ದಿದೆ. ಕುರ್ಚಿಯೊಂದು ಇದ್ದಕ್ಕಿದ್ದಂತೆ ಅಲುಗಾಡಿದೆ. ಈ ಪ್ರಕರಣ ಧನ್ಬಾದ್ ನ ಗೋಧರ್ನ ವಿದ್ಯುತ್ ಸಬ್ಸ್ಟೇಷನ್ ನಲ್ಲಿ ನಡೆದಿದೆ.
ಕಚೇರಿ ಕೋಣೆಯಲ್ಲಿ ಇರಿಸಲಾಗಿರುವ ಪ್ಲಾಸ್ಟಿಕ್ ಕುರ್ಚಿ ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿದೆ. ಈ ಘಟನೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ ಚರ್ಚೆಯ ಕೇಂದ್ರವಾಗಿದೆ.
ವಿಡಿಯೋ ವೈರಲ್ ಆಗ್ತಿದ್ದಂತೆ ಭೂತದ ಕಥೆ ಹುಟ್ಟಿಕೊಂಡಿದೆ. ಕೆಲವು ದಿನಗಳ ಹಿಂದೆ ಅಲ್ಲಿನ ಉದ್ಯೋಗಿಯೊಬ್ಬರು ಮೃತಪಟ್ಟಿದ್ದರು. ಇದರ ನಂತರ ಕುರ್ಚಿ ಚಲಿಸುವ ಘಟನೆ ಬೆಳಕಿಗೆ ಬಂದಾಗ ಎಲ್ಲಾ ಉದ್ಯೋಗಿಗಳು ಭಯಭೀತರಾದರು. ಉದ್ಯೋಗಿಯೊಬ್ಬರು ಇದರ ವಿಡಿಯೋ ಮಾಡಿದ್ದಾರೆ ಮತ್ತು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ.