ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಾದ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಜನತೆಯ ನೆರವಿಗಾಗಿ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಪ್ರಕಟಿಸಿತ್ತು.
ಈ ಪೈಕಿ ಪಿಎಂ ಗರೀಬ್ ಕಲ್ಯಾಣ ಯೋಜನೆಯಡಿ ಜನಧನ್ ಖಾತೆ ಹೊಂದಿರುವವರಿಗೆ ಪ್ರತಿ ತಿಂಗಳು 500 ರೂ. ಗಳಂತೆ ಮೂರು ತಿಂಗಳುಗಳ ಕಾಲ ನೇರವಾಗಿ ಹಣ ಹಾಕುವುದಾಗಿ ಹೇಳಿತ್ತು.
ಅದರಂತೆ ಫಲಾನುಭವಿಗಳ ಖಾತೆಗೆ ಒಟ್ಟು 1,500 ರೂ. ಹಾಕಲಾಗಿದ್ದು ಆದರೆ ರಾಜ್ಯದಲ್ಲಿ ಒಟ್ಟು 1,61,93,000 ಜನಧನ್ ಖಾತೆದಾರರ ಪೈಕಿ 1,22,27,000 ಮಂದಿ ಮಾತ್ರ ತಮ್ಮ ಖಾತೆಗೆ ಆಧಾರ್ ಜೋಡಣೆ ಮಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಧಾರ್ ಜೋಡಣೆ ಮಾಡದ ಫಲಾನುಭವಿಗಳಿಗೆ ಹಣ ತಲುಪಿಲ್ಲ ಎಂದು ತಿಳಿದುಬಂದಿದೆ.