alex Certify ಆಂಧ್ರಪ್ರದೇಶದಲ್ಲಿ ಹರಡುತ್ತಿರುವ ವಿಚಿತ್ರ ರೋಗಕ್ಕೆ ಕಾರಣ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಂಧ್ರಪ್ರದೇಶದಲ್ಲಿ ಹರಡುತ್ತಿರುವ ವಿಚಿತ್ರ ರೋಗಕ್ಕೆ ಕಾರಣ ಪತ್ತೆ

ಹೈದರಾಬಾದ್: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ಜನರು ವಿಚಿತ್ರ ರೋಗದಿಂದ ಬಳಲುತ್ತಿದ್ದು, ರೋಗಿಗಳ ಸಂಖ್ಯೆ 546ಕ್ಕೆ ಏರಿಕೆಯಾಗಿದೆ. ಇದೀಗ ಈ ರೋಗಕ್ಕೆ ಕಾರಣವನ್ನು ದೆಹಲಿಯ ಏಮ್ಸ್ ಆಸ್ಪತ್ರೆ ಪತ್ತೆ ಮಾಡಿದೆ.

ಪಶ್ಚಿಮ ಗೋದಾವರಿಯ ಏಲೂರು ಪ್ರದೇಶದಲ್ಲಿ 546 ಜನರು ನಿಗೂಢ ಕಾಯಿಲೆಯಿಂದ ಬಳಲುತಿದ್ದಾರೆ. ಅವರಲ್ಲಿ 398ಜನರು ಗುಣಮುಖರಾಗಿದ್ದಾರೆ. ಈ ವಿಚಿತ್ರ ರೋಗಕ್ಕೆ ಲೆಡ್ ಅಥವಾ ಸೀಸ ಕಾರಣ ಎಂದು ಏಮ್ಸ್ ಆಸ್ಪತ್ರೆ ವರದಿಯಲ್ಲಿ ತಿಳಿಸಿದೆ.

ರೋಗಿಗಳ ರಕ್ತದ ಮಾದರಿಯಲ್ಲಿ ಸೀಸ ಮತ್ತು ನಿಕಲ್ ಪತ್ತೆಯಾಗಿದೆ. ಸೀಸ ಮನುಷ್ಯನ ದೇಹವನ್ನು ಸೇರಿದರೆ ಅದು ನ್ಯೂರೋ ಟಾಕ್ಸಿಕ್ ಲಕ್ಷಣವನ್ನುಂಟು ಮಾಡುತ್ತದೆ. ಬ್ಯಾಟರಿಗಳಲ್ಲಿ ಬಳಕೆಯಾಗುವ ಈ ಲೋಹ ಕುಡಿಯುವ ನೀರು ಹಾಗೂ ಹಾಲಿನ ಮೂಲಕ ಮನುಷ್ಯನ ದೇಹ ಸೇರಿರುವ ಸಾಧ್ಯತೆಯಿದೆ ಎಂದು ಏಮ್ಸ್ ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಸಂಸದ ಜಿವಿಎಲ್ ನರಸಿಂಹ ರಾವ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...