alex Certify ʼವಾಟ್ಸಾಪ್ʼ ಮೂಲಕ ಆಗಲಿದೆ ಶಾಲೆಯ ಅಡ್ಮಿಷನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಾಟ್ಸಾಪ್ʼ ಮೂಲಕ ಆಗಲಿದೆ ಶಾಲೆಯ ಅಡ್ಮಿಷನ್

During lockdown, WhatsApp learning for govt primary school ...

ಕೊರೊನಾ ಸೋಂಕು ಇಡೀ ವಿಶ್ವದ ಜನಜೀವನವನ್ನು ವ್ಯತ್ಯಯಗೊಳಿಸಿದೆ. ಕೊರೊನಾದಿಂದಾಗಿ ಸರ್ಕಾರಿ ಕೆಲಸ ಸೇರಿದಂತೆ ಎಲ್ಲ ಕೆಲಸಗಳು ಸ್ಥಗಿತಗೊಂಡಿವೆ. ಇದ್ರ ಜೊತೆಗೆ ಶಾಲಾ-ಕಾಲೇಜುಗಳು ಬಾಗಿಲು ಮುಚ್ಚಿವೆ. ಕಳೆದ ಎರಡು ತಿಂಗಳಿಂದ ಯಾವುದೇ ಶಾಲೆಯ ಕೆಲಸ ನಡೆಯುತ್ತಿಲ್ಲ. ಕೆಲ ಶಾಲೆಗಳು ಆನ್ಲೈನ್ ಮೂಲಕ ಮಕ್ಕಳಿಗೆ ಪಾಠ ಹೇಳ್ತಿವೆ.

ಉತ್ತರ ಪ್ರದೇಶದ ಸರ್ಕಾರ  ಶಾಲಾ ವಿದ್ಯಾರ್ಥಿಗಳ ಪ್ರವೇಶಕ್ಕೆ ಒಂದು ವಿಶಿಷ್ಟವಾದ ಮಾರ್ಗವನ್ನು ಸೂಚಿಸಿದೆ. ಸಾಮಾಜಿಕ ಮಾಧ್ಯಮ ವಾಟ್ಸಾಪ್ ಮೂಲಕ ಪ್ರವೇಶ ಪಡೆಯಲು ಯುಪಿ ಸರ್ಕಾರ ನಿರ್ಧರಿಸಿದೆ. ಶಿಕ್ಷಣ ಇಲಾಖೆಯ ಸೂಚನೆಗಳ ಪ್ರಕಾರ, ವಾಟ್ಸಾಪ್ ಮೂಲಕ ಮುಂದಿನ ತರಗತಿಗೆ ಪ್ರವೇಶ ನೀಡಲಾಗ್ತಿದೆ.

ವಿದ್ಯಾರ್ಥಿಗಳು ಅಥವಾ ಪೋಷಕರು ಶಾಲಾ ಆಡಳಿತ ಮಂಡಳಿ ನೀಡಿದ ವಾಟ್ಸಾಪ್ ಸಂಖ್ಯೆಗೆ ಮೆಸ್ಸೇಜ್ ಕಳುಹಿಸಬೇಕಾಗುತ್ತದೆ. ಈ ಮೂಲಕ ಮುಂದಿನ ತರಗತಿಗೆ ಅವರ ಪ್ರವೇಶವನ್ನು ಪರಿಗಣಿಸಲಾಗುತ್ತದೆ. ಲಾಕ್‌ಡೌನ್ ಮುಗಿದ ನಂತರ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಶಾಲೆಗೆ ಸಲ್ಲಿಸಬೇಕಾಗುತ್ತದೆ.

7, 8, 9 ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯಿಲ್ಲದೆ ಬಡ್ತಿ ನೀಡಲಾಗುವುದು ಎಂದು ಈ ಹಿಂದೆ ಉತ್ತರ ಪ್ರದೇಶ ಸರ್ಕಾರ ಘೋಷಿಸಿತ್ತು. ಈಗ ವಾಟ್ಸಾಪ್ ಮೂಲಕ ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಶುರು ಮಾಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...