ಕೊರೊನಾ ಸೋಂಕು ತಡೆಗಟ್ಟಲು ಇತ್ತೀಚಿನ ದಿನಗಳಲ್ಲಿ ಎಲ್ಲರೂ ಸ್ಯಾನಿಟೈಸರ್ ಗಳನ್ನು ಬಳಸುವುದು ಅವಶ್ಯಕವಾಗಿದೆ. ಆದರೆ ಈ ಸ್ಯಾನಿಟೈಸರ್ ಗಳಲ್ಲಿ ಆಲ್ಕೋಹಾಲ್ ಬಳಸುತ್ತಾರೆ. ಆದರೆ ಇದನ್ನು ಕೈಗಳಿಗೆ ಬಳಸುವುದು ಒಳ್ಳೆಯದೇ…? ಎಂಬ ಗೊಂದಲಕ್ಕೆ ಇಲ್ಲಿದೆ ಉತ್ತರ.
ಆಲ್ಕೋಹಾಲ್ ನಲ್ಲಿ ಇರುವ ಅಂಶಗಳು ಕೊರೊನಾ ವೈರಸ್ ನ ಮೇಲ್ಮೈಯನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ. ಆದರೆ ನಿಮ್ಮ ಸ್ಯಾನಿಟೈಸರ್ ನಲ್ಲಿರುವ ಆಲ್ಕೋಹಾಲ್ ಪ್ರಮಾಣವು ಶೇ.80 ರವರೆಗೆ ಇರಬೇಕು.
ಆಲ್ಕೋಹಾಲ್ ನಿಂದ ತಯಾರಿಸಿದ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಬಳಸಿದರೆ ಇದು ನಿಮ್ಮ ಕೈಗಳಲ್ಲಿನ ವೈರಸ್ ಅನ್ನು ಕೊಲ್ಲುತ್ತದೆ. ಆದರೆ ಸ್ಯಾನಿಟೈಸರ್ ತಯಾರಿಸುವಾಗ ಸರಿಯಾದ ಪ್ರಮಾಣದಲ್ಲಿ ಆಲ್ಕೋಹಾಲ್ ಬಳಸಿದಾಗ ಮಾತ್ರ ಇದು ಸಾಧ್ಯ ಎನ್ನಲಾಗಿದೆ.