alex Certify BIG NEWS: ಮಾರ್ಚ್ 31 ರ ವರೆಗೆ ಅಂತರರಾಷ್ಟ್ರೀಯ ವಿಮಾನ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾರ್ಚ್ 31 ರ ವರೆಗೆ ಅಂತರರಾಷ್ಟ್ರೀಯ ವಿಮಾನ ಸ್ಥಗಿತ

ನವದೆಹಲಿ: ಮಾರ್ಚ್ 31 ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಸರಕು ವಿಮಾನಗಳು ಕಾರ್ಯನಿರ್ವಹಿಸಲಿವೆ.

ಸಾಗರೋತ್ತರ ವಿಮಾನಗಳ ಸಂಚಾರ ನಿಷೇಧ ಫೆಬ್ರವರಿ 28ಕ್ಕೆ ಕೊನೆ ಆಗಬೇಕಿತ್ತು. ಆದರೆ, ಮಾರ್ಚ್ 31 ರವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತ ಮುಂದುವರಿಸಲಾಗಿದೆ. ಡೈರೆಕ್ಟರೇಟ್ ಜನರಲ್ ಅಫ್ ಸಿವಿಲ್ ಎವಿಯೇಷನ್ 2021 ರ ಮಾರ್ಚ್ 31 ರ ರಾತ್ರಿ 11.59 ರವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿದೆ.

2020 ರ ಮಾರ್ಚ್ 23 ರಂದು ಕೊರೋನಾ ಸೋಂಕಿನ ಕಾರಣದಿಂದ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಂದೇ ಭಾರತ್ ಮಿಷನ್ ಅಡಿ ಕೆಲವು ವಿಮಾನಗಳ ಕಾರ್ಯಾಚರಣೆ ನಡೆಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...