
ನವದೆಹಲಿ: ಮಾರ್ಚ್ 31 ರ ವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತಗೊಳಿಸಲಾಗಿದೆ. ಸರಕು ವಿಮಾನಗಳು ಕಾರ್ಯನಿರ್ವಹಿಸಲಿವೆ.
ಸಾಗರೋತ್ತರ ವಿಮಾನಗಳ ಸಂಚಾರ ನಿಷೇಧ ಫೆಬ್ರವರಿ 28ಕ್ಕೆ ಕೊನೆ ಆಗಬೇಕಿತ್ತು. ಆದರೆ, ಮಾರ್ಚ್ 31 ರವರೆಗೆ ಅಂತರಾಷ್ಟ್ರೀಯ ವಿಮಾನಯಾನ ಸ್ಥಗಿತ ಮುಂದುವರಿಸಲಾಗಿದೆ. ಡೈರೆಕ್ಟರೇಟ್ ಜನರಲ್ ಅಫ್ ಸಿವಿಲ್ ಎವಿಯೇಷನ್ 2021 ರ ಮಾರ್ಚ್ 31 ರ ರಾತ್ರಿ 11.59 ರವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಸ್ಥಗಿತಗೊಳಿಸಿದೆ.
2020 ರ ಮಾರ್ಚ್ 23 ರಂದು ಕೊರೋನಾ ಸೋಂಕಿನ ಕಾರಣದಿಂದ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ವಂದೇ ಭಾರತ್ ಮಿಷನ್ ಅಡಿ ಕೆಲವು ವಿಮಾನಗಳ ಕಾರ್ಯಾಚರಣೆ ನಡೆಸಲಾಗಿತ್ತು.