alex Certify ಭೂಕಂಪದಿಂದ ತತ್ತರಿಸಿದ ಮೊರಾಕೊಗೆ ಸಹಾಯದ ಹಸ್ತ ಚಾಚಿದ ಭಾರತ : ಸಹಾಯವಾಣಿ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೂಕಂಪದಿಂದ ತತ್ತರಿಸಿದ ಮೊರಾಕೊಗೆ ಸಹಾಯದ ಹಸ್ತ ಚಾಚಿದ ಭಾರತ : ಸಹಾಯವಾಣಿ ಬಿಡುಗಡೆ

ಮೊರಾಕ್ಕೊದಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವಿನ ಸಂಖ್ಯೆ 296 ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ಗಾಯಗೊಂಡಿದ್ದಾರೆ.

ಮೊರಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದು, ಸಹಾಯ ಬೇಕಿದ್ದಲ್ಲಿ ಭಾರತೀಯರನ್ನು ಸಂಪರ್ಕಿಸುವಂತೆ ಕೇಳಿಕೊಂಡಿದೆ. ಮೊರಾಕೊದಲ್ಲಿರುವ ಭಾರತೀಯ ಪ್ರಜೆಗಳು ಯಾವುದೇ ಸಹಾಯ ಬೇಕಿದ್ದಲ್ಲಿ ಭಾರತೀಯ ರಾಯಭಾರ ಕಚೇರಿಯ ಸಹಾಯವಾಣಿ ಸಂಖ್ಯೆ +212661297491 ಅನ್ನು ಸಂಪರ್ಕಿಸಬಹುದು” ಎಂದು ರಾಯಭಾರ ಕಚೇರಿ ಶನಿವಾರ X ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಭೀಕರ ಭೂಕಂಪಕ್ಕೆ ಮೊರಾಕ್ಕೊ ಜನರು ತತ್ತರಿಸಿ ಹೋಗಿದ್ದು, ಎಲ್ಲಿ ನೋಡಿದರೂ ಸಾವು , ನೋವು , ಗಾಯಾಳುಗಳ ಆಕ್ರಂದನ ಕಣ್ಣಿಗೆ ಕಟ್ಟುತ್ತಿದೆ. ಅಂತರ್ ಜಾಲ ದಲ್ಲಿ ಭೂಕಂಪನದ ಭಯಾನಕ ದೃಶ್ಯಗಳು ವೈರಲ್ ಆಗಿದೆ.

ಭೀಕರ ಭೂಕಂಪಕ್ಕೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದು, ಸಹಾಯದ ಹಸ್ತ ಚಾಚಿಸಿದ್ದಾರೆ. ನಿಮ್ಮ ನೆರವಿಗೆ ಭಾರತ ಯಾವಾಗಲೂ ಸಿದ್ದವಿದೆ ಎಂದು ಹೇಳಿದ್ದಾರೆ. ಮೊರಾಕೊದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, 296 ಜನ ಸಾವನ್ನಪ್ಪಿದ್ದಾರೆ. ರಾತ್ರಿ 11 ಗಂಟೆಯ ನಂತರ ಮರಕೇಶ್ನ ನೈಋತ್ಯಕ್ಕೆ 72 ಕಿಮೀ ಮತ್ತು ಅಟ್ಲಾಸ್ ಪರ್ವತ ಪಟ್ಟಣವಾದ ಒಕೈಮೆಡೆನ್ನಿಂದ 56 ಕಿಮೀ ಪಶ್ಚಿಮಕ್ಕೆ ಸಂಭವಿಸಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...