ಅಂಡರ್-19 ಕ್ರಿಕೆಟ್ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ನಿವೇತನ್ ರಾಧಾಕೃಷ್ಣನ್ ತಮ್ಮೆರಡೂ ಕೈಗಳಿಂದ ಸ್ಪಿನ್ ಬೌಲಿಂಗ್ ಮಾಡುವ ಕ್ಷಮತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ.
ವೆಸ್ಟ್ ಇಂಡೀಸ್ ಅಂಡರ್-19 ತಂಡದ ವಿರುದ್ಧದ ಪಂದ್ಯದಲ್ಲಿ ಎದುರಾಳಿಯ ಬಲಗೈ ಬ್ಯಾಟ್ಸ್‌ಮನ್‌ಗಳಿಗೆ ಎಡಗೈ ಸ್ಪಿನ್ ಬೌಲಿಂಗ್ ಮಾಡಿದ ರಾಧಾಕೃಷ್ಣನ್, ಎಡಗೈ ಬ್ಯಾಟ್ಸ್‌ಮನ್‌ಗಳಿಗೆ ಬಲಗೈನಲ್ಲಿ ಆಫ್‌ಸ್ಪಿನ್ ಬೌಲಿಂಗ್ ಮಾಡಿದ್ದಾರೆ. ಪಂದ್ಯದಲ್ಲಿ ಎದುರಾಳಿಯ ಮೂರು ವಿಕೆಟ್ ಪಡೆದ ರಾಧಾಕೃಷ್ಣನ್ ಗಮನಾರ್ಹ ಪ್ರದರ್ಶನ ನೀಡಿದ್ದಾರೆ.
ಬಿಡುವಿನ ವೇಳೆ ಎಸ್ಟೇಟ್ ಮಹಿಳಾ ಕಾರ್ಮಿಕರ ಭರ್ಜರಿ ಕ್ರಿಕೆಟ್
ತನ್ನ ಆರನೇ ವಯಸ್ಸಿನಿಂದಲೇ ಎರಡೂ ಕೈಗಳಲ್ಲಿ ಸ್ಪಿನ್ ಬೌಲಿಂಗ್ ಮಾಡುತ್ತ ಬಂದ ರಾಧಾಕೃಷ್ಣನ್, ತನಗೆ ಹೀಗೆ ಮಾಡಲು ತನ್ನ ತಂದೆ ಸಲಹೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ.
“ನಾನು ಸ್ವಭಾವತಃ ಬಲಗೈ ಆಟಗಾರ ಹಾಗೂ ಬಲಗೈನಲ್ಲಿ ಆಫ್‌ಸ್ಪಿನ್ ಬೌಲಿಂಗ್ ಮಾಡುತ್ತಿದ್ದೆ ಅಷ್ಟೇ. ನೀನೇಕೆ ಎಡಗೈನಲ್ಲಿ ಬೌಲಿಂಗ್ ಮಾಡಬಾರದು ? ಎಂದು ಅಪ್ಪ ಕೇಳಿದರು. ಯಾರೊಬ್ಬರೂ ಇದನ್ನು ಮಾಡುವುದಿಲ್ಲ; 2008ರಲ್ಲಿ ನನಗೆ ಆರು ವರ್ಷ ವಯಸ್ಸಾಗಿದ್ದಾಗಿಂದಲೂ ಯಾರೊಬ್ಬರೂ ತಮ್ಮ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡುವುದನ್ನು ನಾವು ಕಂಡಿಲ್ಲ. ಚೆನ್ನೈನ ಲೀಗ್ ಕ್ರಿಕೆಟ್‌ನಲ್ಲಿ ಯಾರೂ ಸಹ ಎರಡೂ ಕೈಗಳಲ್ಲಿ ಬೌಲಿಂಗ್ ಮಾಡುವುದನ್ನು ನಾನು ಕಂಡಿಲ್ಲ. ಆದರೆ ನಾನು, ಇದನ್ನೊಮ್ಮೆ ಪ್ರಯತ್ನಿಸಿ ನೋಡಬಾರದೇಕೆ ಎಂದು ಮುಂದಾದೆ. ನನ್ನ ಆಟದಲ್ಲಿ ವೈಫಲ್ಯದ ಭಯಕ್ಕೆ ಆಸ್ಪವಿರಲಿಲ್ಲ. ನನ್ನ ಬಗ್ಗೆ ಜನ ಏನು ಅಂದುಕೊಳ್ಳುತ್ತಾರೆ ಎಂದು ಕೇರ್ ಮಾಡದೇ ಇದ್ದಲ್ಲಿ, ಸಾಧಿಸಲಿಕ್ಕೆ ಮಿತಿ ಎನ್ನುವುದು ಎಲ್ಲಿದೆ?” ಎಂದು ಹೇಳುತ್ತಾರೆ ರಾಧಾಕೃಷ್ಣನ್.
ಕಳೆದ ವರ್ಷದ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನೆಟ್ ಬೌಲರ್ ಆಗಿ ಅನುಭವ ಪಡೆದಿರುವ ರಾಧಾಕೃಷ್ಣನ್ ಈ ವರ್ಷದ ಐಪಿಎಲ್ ಹರಾಜಿನ ವೇಳೆ ಹರಾಜುದಾರರ ಗಮನ ಸೆಳೆಯಬಲ್ಲರೇ ಕಾದು ನೋಡಬೇಕು.
https://youtu.be/4giNXkklKRw