ವಾಷಿಂಗ್ಟನ್: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂದು ಕನ್ನಡದಲ್ಲಿ ಗಾದೆ ಮಾತಿದೆ. ಹಾಗೆಯೇ ಅಮೆರಿಕದಲ್ಲಿ ಮೀನುಗಳನ್ನು ಮತ್ತೆ ನದಿ, ಸರೋವರಗಳಿಗೆ ಸೇರಿಸಲಾಗಿದೆ. ಈ ವಿಡಿಯೊ ಇದೀಗ ಸಖತ್ ವೈರಲ್ ಆಗಿದೆ.
ಅಮೆರಿಕಾದ ಉತಾಹ್ ವಿಭಾಗದ ವನ್ಯಜೀವಿಗಳ ಸಂರಕ್ಷಣಾ ತಂಡವು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಲಕ್ಷಾಂತರ ಮೀನುಗಳನ್ನು ಸಂರಕ್ಷಿಸಿ ಅದನ್ನು ವಿಮಾನದಲ್ಲಿ ತುಂಬಲಾಗಿದೆ. ಮೀನುಗಳನ್ನು ಹೊತ್ತೊಯ್ದ ವಿಮಾನವು 200ಕ್ಕೂ ಹೆಚ್ಚು ಸರೋವರಗಳಿಗೆ ಬಿಡಲಾಯಿತು. ವಿಮಾನದಿಂದ ಮೀನುಗಳನ್ನು ಸುರಿಯುವ ದೃಶ್ಯ ಮಾತ್ರ ಅಮೋಘವಾಗಿದೆ.
ರಾಜಕೀಯ ದ್ವೇಷದಿಂದ ಹೆಚ್ಡಿಕೆ ಈ ರೀತಿ ಮಾಡಿದ್ರು: ಸಚಿವ ಆರ್.ಅಶೋಕ್
ಈ ಸಂಬಂಧ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಉತಾಹ್ ವಿಭಾಗದ ವನ್ಯಜೀವಿಗಳ ಸಂರಕ್ಷಣಾ ತಂಡ, ‘’ಮೀನುಗಳನ್ನು ಈ ರೀತಿ ಬಿಡುತ್ತಿರುವ ಪ್ರಕ್ರಿಯೆ ನಿಮಗೆ ಕ್ರೂರವಾಗಿ ಕಾಣಿಸಬಹುದು. ಆದರೆ ಮೀನುಗಳಿಗೆ ಹಾನಿಯಾಗಿಲ್ಲ’’ ಎಂದು ಹೇಳಿದೆ.
https://www.youtube.com/watch?v=vJ-Nu0iApJo