ಬಹುತೇಕ ಎಲ್ಲ ಹುಡುಗಿಯರೂ ಸೌಂದರ್ಯ ವೃದ್ಧಿಸಿಕೊಳ್ಳಲು ಬ್ಯೂಟಿಪಾರ್ಲರ್ ಮೊರೆ ಹೋಗ್ತಾರೆ. ಇದ್ರ ಜೊತೆಗೆ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸ್ತಾರೆ. ಆದ್ರೆ ಆರೋಗ್ಯಕ್ಕಾಗಿ ಸೇವನೆ ಮಾಡುವ ಆಹಾರದ ಮೂಲಕವೂ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲಿ ಉಳಿದಿರುವ ಆಹಾರ ನಿಮ್ಮ ಮುಖದ ಸುಂದರತೆ ಹೆಚ್ಚಿಸುತ್ತದೆ.
ರೊಟ್ಟಿ ಕೂಡ ನಿಮ್ಮ ಮುಖವನ್ನು ಕಾಂತಿಯುತಗೊಳಿಸಬಹುದು. ರೊಟ್ಟಿಯನ್ನು ಸಣ್ಣ ತುಂಡುಗಳಾಗಿ ಮಾಡಿ. ಅದಕ್ಕೆ ಹಾಲನ್ನು ಹಾಕಿ 15 ನಿಮಿಷ ಬಿಡಿ. ರೊಟ್ಟಿ ಮೃದುವಾಗ್ತಿದ್ದಂತೆ ಅದನ್ನು ಪೇಸ್ಟ್ ಮಾಡಿ. ಇದನ್ನು ಮುಖ ಅಥವಾ ದೇಹದ ಬೇರೆ ಭಾಗಕ್ಕೆ ಹಚ್ಚಿ 20 ನಿಮಷ ಬಿಡಿ. ನಂತ್ರ ತೊಳೆದುಕೊಳ್ಳಿ. ಚರ್ಮ ಮೃದುವಾಗುತ್ತದೆ.
ಮೊಸರು ಹೆಚ್ಚಿದ್ದರೆ ಮೊಸರಿಗೆ ಅಲೋವೇರಾ ಹಾಗೂ ಜೇನು ತುಪ್ಪವನ್ನು ಹಾಕಿ ಮಿಕ್ಸ್ ಮಾಡಿ. ಈ ಫೇಸ್ ಮಾಸ್ಕನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಡಿ. ನಂತ್ರ ಮುಖ ತೊಳೆದುಕೊಳ್ಳಿ.
ಅವಲಕ್ಕಿ ಕೂಡ ಸ್ಕ್ರಬ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಅವಲಕ್ಕಿಯನ್ನು ಮೊದಲು ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ. ನಂತ್ರ ಜೇನುತುಪ್ಪವನ್ನು ಹಾಕಿ ಇಡೀ ದೇಹಕ್ಕೆ ಹಚ್ಚಿ ತಿಕ್ಕಿ. ನಂತ್ರ ಸ್ನಾನ ಮಾಡಿ.