alex Certify BIG NEWS: ತೆರಿಗೆದಾರರು ವರ್ಷದಲ್ಲಿ ಒಮ್ಮೆ ಮಾತ್ರ ಸಲ್ಲಿಸಬಹುದು ನವೀಕರಿಸಿದ ರಿಟರ್ನ್ಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತೆರಿಗೆದಾರರು ವರ್ಷದಲ್ಲಿ ಒಮ್ಮೆ ಮಾತ್ರ ಸಲ್ಲಿಸಬಹುದು ನವೀಕರಿಸಿದ ರಿಟರ್ನ್ಸ್….!

ಯಾವುದೇ ಒಬ್ಬ ತೆರಿಗೆದಾರರು ಮೌಲ್ಯಮಾಪನದ ವರ್ಷದಲ್ಲಿ ಒಂದೇ ಒಂದು ನವೀಕರಿಸಿದ ರಿಟರ್ನ್ ಸಲ್ಲಿಸಲು ಮಾತ್ರ ಅನುಮತಿ ಇರುತ್ತದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಭಾರತೀಯ ಕೈಗಾರಿಕೆಗಳ ಚೇಂಬರ್‌‌ (ಸಿಐಐ) ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಬಿಡಿಟಿ ಅಧ್ಯಕ್ಷ ಜೆ ಬಿ ಮೊಹಪಾತ್ರ, ಈ ನಿಬಂಧನೆಯ ಉದ್ದೇಶವು ತಮ್ಮ ರಿಟರ್ನ್‌ಗಳನ್ನು ಸಲ್ಲಿಸಲು ನಿಜವಾಗಿಯೂ ತಪ್ಪಿಸಿಕೊಂಡ ಜನರಿಗೆ ಸಹಾಯ ಮಾಡುವುದಾಗಿದೆ ಎಂದಿದ್ದಾರೆ.

ಮೊದಲ ರಾತ್ರಿ ನಂತರ ವಧುವಿಗೆ ಕಾಡುವ ಚಿಂತೆ ಏನು……?

ಅಂತಹ ತೆರಿಗೆದಾರರು “ಒಂದು ಮೌಲ್ಯಮಾಪನ ವರ್ಷದಲ್ಲಿ ಒಂದು ನವೀಕರಿಸಿದ ರಿಟರ್ನ್ ಅನ್ನು ಮಾತ್ರ ಸಲ್ಲಿಸಬಹುದು” ಎಂದು ಮೊಹಾಪಾತ್ರ ತಿಳಿಸಿದ್ದಾರೆ.

ಯಾವುದೇ ವ್ಯತ್ಯಾಸ ಅಥವಾ ಲೋಪಗಳನ್ನು ಸರಿಪಡಿಸಲು, 2022-23ರ ಬಜೆಟ್‌ನಲ್ಲಿ, ತೆರಿಗೆ ಪಾವತಿಗೆ ಒಳಪಟ್ಟು ಸಲ್ಲಿಸಿದ ಎರಡು ವರ್ಷಗಳೊಳಗೆ ತೆರಿಗೆದಾರರಿಗೆ ತಮ್ಮ ಐಟಿಆರ್‌‌ಗಳನ್ನು ನವೀಕರಿಸಲು ಅನುಮತಿ ನೀಡಿದೆ.

ನವೀಕರಿಸಿದ ಐಟಿಆರ್ ಅನ್ನು 12 ತಿಂಗಳೊಳಗೆ ಸಲ್ಲಿಸಿದರೆ ಬಾಕಿ ತೆರಿಗೆ ಮತ್ತು ಬಡ್ಡಿಯ ಮೇಲೆ ಹೆಚ್ಚುವರಿ 25 ಪ್ರತಿಶತದಷ್ಟು ಮೊತ್ತ ಪಾವತಿಸಬೇಕಾಗುತ್ತದೆ, ಇದೇ ದರವು 12 ತಿಂಗಳ ನಂತರ ಸಲ್ಲಿಕೆಯಾದಲ್ಲಿ 50 ಪ್ರತಿಶತಕ್ಕೆ ಏರುತ್ತದೆ, ಆದರೆ ಸಂಬಂಧ ಪಟ್ಟ ಮೌಲ್ಯಮಾಪನ ವರ್ಷದ ಅಂತ್ಯದಿಂದ 24 ತಿಂಗಳ ಒಳಗೆ.

ಆದಾಗ್ಯೂ, ನಿರ್ದಿಷ್ಟ ಮೌಲ್ಯಮಾಪನ ವರ್ಷಕ್ಕೆ ನೋಟಿಸ್ ನೀಡುವ ಮೂಲಕ ಕಾನೂನು ಕ್ರಮವನ್ನು ಪ್ರಾರಂಭಿಸಿದರೆ, ತೆರಿಗೆದಾರರು ಆ ನಿರ್ದಿಷ್ಟ ವರ್ಷದಲ್ಲಿ ನವೀಕರಿಸಿದ ರಿಟರ್ನ್ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಜೊತೆಗೆ, ತೆರಿಗೆದಾರರು ನವೀಕರಿಸಿದ ರಿಟರ್ನ್ ಸಲ್ಲಿಸಿದರೆ ಮತ್ತು ಹೆಚ್ಚುವರಿ ತೆರಿಗೆಗಳನ್ನು ಪಾವತಿಸದಿದ್ದರೆ ರಿಟರ್ನ್ ಅಮಾನ್ಯವಾಗುತ್ತದೆ.

ಪ್ರಸ್ತುತ, ಆದಾಯ ತೆರಿಗೆ ಮೌಲ್ಯಮಾಪಕರಿಂದ ಕೆಲವು ಆದಾಯಗಳು ತಪ್ಪಿಸಿಕೊಂಡಿದೆ ಎಂದು ಗೊತ್ತಾದಲ್ಲಿ, ಅದು ಸುದೀರ್ಘವಾದ ತೀರ್ಪಿನ ಪ್ರಕ್ರಿಯೆಯ ಮೂಲಕ ಹೋಗುತ್ತದೆ ಮತ್ತು ಹೊಸ ಪ್ರಸ್ತಾವನೆಯು ತೆರಿಗೆದಾರರ ಮೇಲಿನ ನಂಬಿಕೆಯನ್ನು ಮರುಸ್ಥಾಪಿಸುತ್ತದೆ.

“ಅಂತಹ ದೋಷಗಳನ್ನು ಸರಿಪಡಿಸಲು ಅವಕಾಶವನ್ನು ಒದಗಿಸಲು, ಹೆಚ್ಚುವರಿ ತೆರಿಗೆ ಪಾವತಿಯ ಮೇಲೆ ನವೀಕರಿಸಿದ ರಿಟರ್ನ್ ಸಲ್ಲಿಸಲು ತೆರಿಗೆದಾರರಿಗೆ ಅನುಮತಿ ನೀಡುವ ಹೊಸ ನಿಬಂಧನೆಯನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ. ಈ ನವೀಕರಿಸಿದ ರಿಟರ್ನ್ ‌ಅನ್ನು ಸಂಬಂಧಿತ ಮೌಲ್ಯಮಾಪನ ವರ್ಷದ ಅಂತ್ಯದಿಂದ ಎರಡು ವರ್ಷಗಳೊಳಗೆ ಸಲ್ಲಿಸಬಹುದು,” ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ರ ಬಜೆಟ್ ಭಾಷಣದಲ್ಲಿ ವಿವರಿಸಿದ್ದರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...