ಉತ್ತರ ಪ್ರದೇಶ ವಿಭಾಗದಲ್ಲಿ ಆದಾಯ ತೆರಿಗೆ ಇನ್ಸ್‌ಪೆಕ್ಟರ್, ತೆರಿಗೆ ಸಹಾಯಕ, ಹಾಗೂ ವಿವಿಧೋದ್ದೇಶ ಸಿಬ್ಬಂದಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ ಆದಾಯ ತೆರಿಗೆ ಇಲಾಖೆ ನೊಟಿಫಿಕೇಶನ್ ಹೊರಡಿಸಿದೆ.
ಅಕ್ಟೋಬರ್ 8, 2021ರವರೆಗೂ ಅರ್ಜಿ ಸಲ್ಲಿಸಬಹುದಾಗಿದ್ದು, ಈಶಾನ್ಯ ರಾಜ್ಯಗಳು, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರ ಹಾಗೂ ಕೇರಳದ ಅಭ್ಯರ್ಥಿಗಳಿಗೆ ನೇಮಕಾತಿ ಸಂಬಂಧ ಯಾವುದೇ ಪರೀಕ್ಷೆ ಇರುವುದಿಲ್ಲ.
ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳು ಅಗತ್ಯವಿದ್ದಲ್ಲಿ ಸಂದರ್ಶನಕ್ಕೆ ಹಾಜರಾಗಬೇಕಾಗುತ್ತದೆ. ಅಭ್ಯರ್ಥಿಗಳು ಗ್ರೌಂಡ್/ಕ್ಷಮತಾ ಪರೀಕ್ಷೆಗಳಲ್ಲಿ ಭಾಗಿಯಾಗಬೇಕಾಗಿ ಬರಬಹುದು. ಎರಡು ವರ್ಷಗಳ ಪ್ರೊಬೇಷನ್ ಅವಧಿಯು ಶಾಶ್ವತವಾಗುವ ಸಾಧ್ಯತೆ ಇರುತ್ತದೆ.
ಸಾರ್ವಜನಿಕ ಶೌಚಾಲಯಕ್ಕೆ ಹೋಗೋ ಮುನ್ನ ಹುಷಾರ್: ಈ ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಾ..!
ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:
https://www.incometaxindia.gov.in/news/recruitment_of_meritorious_sportspersons__iti_ta_mts_10_8_21.pdf
ನೇಮಕಾತಿ ವಿವರಗಳು:
ಆದಾಯ ತೆರಿಗೆ ನಿರೀಕ್ಷಕರು:- 03 (44,900ರೂ – 1,42,400ರೂ)
ತೆರಿಗೆ ಸಹಾಯಕ:- 13 (25,500ರೂ – 81,100ರೂ)
ವಿವಿಧೋದ್ದೇಶ ಸಿಬ್ಬಂದಿ:- 12 (18,000ರೂ – 56,900ರೂ)
ಅರ್ಜಿಗಳನ್ನು ಈ ವಿಳಾಸಕ್ಕೆ ಕಳುಹಿಸಬೇಕು:- ಆದಾಯ ತೆರಿಗೆ ಅಧಿಕಾರಿ (ಮುಖ್ಯ ಕಚೇರಿ) (ಆಡಳಿತ), ಆದಾಯ ತೆರಿಗೆ ಪ್ರಧಾನ ಆಯುಕ್ತರ ಕಚೇರಿ, ಉತ್ತರ ಪ್ರದೇಶ, (ಪೂರ್ವ), ಆಯ್ಕಾರ್ ಭವನ, 5 ಅಶೋಕ್ ಮಾರ್ಗ್, ಲಖನೌ – 226001.
ವಯೋಮಿತಿ:
ಆದಾಯ ತೆರಿಗೆ ನಿರೀಕ್ಷಕರಿಗೆ:- 18 – 30 ವರ್ಷಗಳು
ತೆರಿಗೆ ಸಹಾಯಕ ಹಾಗೂ ವಿವಿಧೋದ್ಧೇಶ ಸಿಬ್ಬಂದಿ:- 18 – 27 ವರ್ಷಗಳು.