ಕೋವಿಡ್-19 ಕಾಲಘಟ್ಟದಲ್ಲಿ ತೆರಿಗೆ ಪಾವತಿಯ ಮಟ್ಟ ಹೆಚ್ಚಿಸಲು ಕ್ರಮ ತೆಗೆದುಕೊಂಡಿರುವ ಕೇಂದ್ರ ಸರ್ಕಾರ, ತಡವಾಗಿ ತೆರಿಗೆ ಕಟ್ಟುವವರಿಗೆ ಬಡ್ಡಿರಹಿತ ಪಾವತಿಯ ವ್ಯವಸ್ಥೆ ಮಾಡಿಕೊಡುವ ’ವಿವಾದ್ ಸೇ ವಿಶ್ವಾಸ್’ ಸ್ಕೀಂನ ಡೆಡ್ಲೈನ್ ಅನ್ನು ಜೂನ್ 30ರಿಂದ ಆಗಸ್ಟ್ 31ಕ್ಕೆ ವಿಸ್ತರಿಸಲಾಗಿದೆ.
ಇದೇ ವೇಳೆ, ಪಾನ್ ಕಾರ್ಡ್‌ಗೆ ಆಧಾರ್ ಕಾರ್ಡ್ ವಿವರಗಳನ್ನು ಲಗತ್ತಿಸಲು ಕೊನೆಯ ದಿನಾಂಕವನ್ನೂ ಸಹ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯದ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
BIG NEWS: ರಾಮ ಸೇತು ‘ರಾಷ್ಟ್ರೀಯ ಸ್ಮಾರಕ’ವೆಂದು ಘೋಷಿಸಲು ಕೇಂದ್ರದ ಸಿದ್ದತೆ
ವಸತಿ ಮನೆಗಳ ಮೇಲೆ ಹೂಡಿಕೆ ಮಾಡಿರುವ ಮಂದಿಗೆ ಈ ತೆರಿಗೆ ರಿಲೀಫ್ ಅನ್ನು ಕೊಡಲಾಗಿದೆ ಎಂದ ಠಾಕೂರ್, ಏಪ್ರಿಲ್ 1ರ ಬಳಿಕ ಮನೆಯ ಮೇಲೆ ಹೂಡಿಕೆ ಮಾಡಿರುವ ಮಂದಿಗೆ ಈ ಯೋಜನೆ ಅನ್ವಯಿಸಲಿದೆ ಎಂದಿದ್ದಾರೆ.
ಇಂಗ್ಲೀಷ್ ಹಾಡಿಗೆ ದೇಸಿ ಟ್ವಿಸ್ಟ್..! ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಯ್ತು ಈ ವಿಡಿಯೋ
ಇದೇ ವೇಳೆ ಟಿಡಿಎಸ್ ವಿವರಗಳನ್ನು ಫೈಲಿಂಗ್ ಮಾಡಲು ಇರುವ ಡೆಡ್ಲೈನ್ ಅನ್ನು ಜೂನ್ 30ರಿಂದ ಜುಲೈ 15ರವರೆಗೆ ವಿಸ್ತರಿಸಲಾಗಿದ್ದು, ತೆರಿಗೆ ಕಡಿತದ ಪ್ರಮಾಣ ಪತ್ರಗಳ ವಿತರಣೆ ಹಾಗೂ ವಿದೇಶೀ ಹಣದ ರವಾನೆ ಪ್ರಮಾಣ ಪತ್ರಕ್ಕೆಗೆ ಜುಲೈ 15ರಿಂದ ಜುಲೈ 31ರವರೆಗೆ ಡೆಡ್ಲೈನ್ ವಿಸ್ತರಿಸಲಾಗಿದೆ.