ತೆರಿಗೆ ಪಾವತಿದಾರರಿಗೆ ರಿಲೀಫ್ ಕೊಡುವ ಬೆಳವಣಿಗೆಯೊಂದರಲ್ಲಿ, 15ಸಿಎ ಹಾಗೂ 15ಸಿಬಿ ಫಾರಂ ಎಲೆಕ್ಟ್ರಾನಿಕ್ ಫೈಲಿಂಗ್ ಮಾಡಲು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಇವುಗಳನ್ನು ಸಲ್ಲಿಸಲು ಇದ್ದ ಕಡೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
“ಈ ಅರ್ಜಿಗಳನ್ನು ಮ್ಯಾನುವಲ್ ಫಾರ್ಮಾಟ್‌ನಲ್ಲಿ ಅಧಿಕೃತ ಡೀಲರ್‌ಗಳಿಗೆ ಜೂನ್ 30, 2021ರ ಒಳಗೆ ಸಲ್ಲಿಸಬಹುದಾಗಿದೆ” ಎಂದು ಕೇಂದ್ರ ನೇರ ತೆರಿಗೆ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಮಕ್ಕಳು ಹೆಡ್ ಫೋನ್ ಬಳಸ್ತಾರಾ…? ಹಾಗಾದ್ರೆ ಈ ಸುದ್ದಿ ಓದಿ
ಯಾವುದೇ ವಿದೇಶೀ ವಿನಿಮಯವಿದ್ದಲ್ಲಿ, 15ಸಿಎ ಹಾಗೂ 15ಸಿಬಿ ಅರ್ಜಿಗಳನ್ನು ಎಲೆಕ್ಟ್ರಾನಿಕ್ ಆಗಿ ಸಲ್ಲಿಸಬೇಕೆಂದು ಆದಾಯ ತೆರಿಗೆ ಕಾಯಿದೆ 1961 ಸೂಚಿಸುತ್ತದೆ. ಸದ್ಯದ ಮಟ್ಟಿಗೆ ತೆರಿಗೆ ಪಾವತಿದಾರರು, 15ಸಿಎ ಅರ್ಜಿಯನ್ನು ಅಪ್ಲೋಡ್ ಮಾಡುವ ವೇಳೆ 15ಸಿಬಿ ಅರ್ಜಿ ಮೂಲಕ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರವನ್ನೂ ಸಹ ಲಗತ್ತಿಸಬೇಕಿದೆ.
ʼಲಾಕ್ ಡೌನ್ʼ ಸಡಿಲಿಸುತ್ತಿದ್ದಂತೆಯೇ ಶಿಮ್ಲಾದತ್ತ ಪ್ರವಾಸಿಗರ ದಂಡು
www.incometax.gov.in ಪೋರ್ಟಲ್ ಮೂಲಕ 15ಸಿಎ ಹಾಗೂ 15ಸಿಬಿ ಫಾರಂಗಳ ಎಲೆಕ್ಟ್ರಾನಿಕ್ ಸಲ್ಲಿಕೆಯು ತೆರಿಗೆ ಪಾವತಿದಾರರಿಗೆ ಕಷ್ಟವಾಗುತ್ತಿರುವ ಕಾರಣ, ಈ ಅರ್ಜಿಗಳನ್ನು ಅಧಿಕೃತ ಡೀಲರ್‌ಗಳಿಗೆ ಜೂನ್ 30ರೊಳಗೆ ಸಲ್ಲಿಸಲು ಅನುಮತಿ ಕೊಡಲಾಗಿದೆ.