alex Certify ಯೋಗಿ ಸಂಪುಟ: 22 ಮಂದಿಗೆ ಕೊಕ್, 31 ಹೊಸ ಮುಖ, 21 ಹಳಬರು, 5 ಮಹಿಳೆಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗಿ ಸಂಪುಟ: 22 ಮಂದಿಗೆ ಕೊಕ್, 31 ಹೊಸ ಮುಖ, 21 ಹಳಬರು, 5 ಮಹಿಳೆಯರು

ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯ ಉನ್ನತ ನಾಯಕರು ಭಾಗವಹಿಸಿದ್ದ ಭವ್ಯ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಶುಕ್ರವಾರ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.

ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಯೋಗಿ ಸರ್ಕಾರದ ಮೊದಲ ಅವಧಿಯಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಪಾಠಕ್ ಅವರನ್ನು ಡಿಸಿಎಂ ಸ್ಥಾನ ನೀಡಲಾಗಿದೆ.

ಗೋರಖನಾಥ ಮಠದ ಪ್ರಧಾನ ಅರ್ಚಕರೂ ಆಗಿರುವ ಆದಿತ್ಯನಾಥ್ ಅವರು ಉತ್ತರ ಪ್ರದೇಶದ 33ನೇ ಮುಖ್ಯಮಂತ್ರಿಯಾಗಿದ್ದಾರೆ. ಸಂಪೂರ್ಣ ಐದು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಸತತ ಎರಡನೇ ಅವಧಿಗೆ ಗೆದ್ದ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ ಮೊದಲ ಮುಖ್ಯಮಂತ್ರಿ ಅವರು.

ಇಬ್ಬರು ಉಪ ಮುಖ್ಯಮಂತ್ರಿಗಳು, 16 ಇತರ ಕ್ಯಾಬಿನೆಟ್ ಸಚಿವರು, 14 ರಾಜ್ಯ ಸಚಿವರು(ಸ್ವತಂತ್ರ ಉಸ್ತುವಾರಿ) ಮತ್ತು 20 ರಾಜ್ಯ ಸಚಿವರು ಸೇರಿದಂತೆ ಯೋಗಿ ಆದಿತ್ಯನಾಥ್ ಮತ್ತು ಅವರ 52 ಸದಸ್ಯರ ತಂಡಕ್ಕೆ ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದರು.

ಹಿಂದಿನ ಆದಿತ್ಯನಾಥ್ ಸರ್ಕಾರದ 21 ಸಚಿವರನ್ನು ಉಳಿಸಿಕೊಂಡಿದ್ದು, 22 ಸಚಿವರನ್ನು ಕೈಬಿಡಲಾಗಿದೆ. ನೂತನ ಸಂಪುಟದಲ್ಲಿ 31 ಮಂದಿ ಹೊಸ ಮುಖಗಳಿದ್ದು, ಐವರು ಮಹಿಳಾ ಸಚಿವರೂ ಇದ್ದಾರೆ.

ಹೊಸ ಸರ್ಕಾರದಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆಪಿಎಸ್ ರಾಥೋಡ್ ಮತ್ತು ರಾಜ್ಯ ಉಪಾಧ್ಯಕ್ಷ ಅರವಿಂದ್ ಕುಮಾರ್ ಶರ್ಮಾ ಕೂಡ ಇದ್ದಾರೆ. ಮೂವರಿಗೂ ಸಂಪುಟ ಸಚಿವ ಸ್ಥಾನ ನೀಡಲಾಗಿದೆ.

ಮತ್ತೊಬ್ಬ ರಾಜ್ಯ ಉಪಾಧ್ಯಕ್ಷ ದಯಾ ಶಂಕರ್ ಸಿಂಗ್ ಅವರನ್ನು ರಾಜ್ಯ ಸಚಿವ(ಸ್ವತಂತ್ರ ಉಸ್ತುವಾರಿ) ಮಾಡಲಾಗಿದೆ. ಇದರರ್ಥ ಈಗ ರಾಜ್ಯ ಬಿಜೆಪಿ ಸಂಘಟನೆಯ ಪುನಶ್ಚೇತನಕ್ಕೆ ಮುಂದಾಗಿದೆ. ಈ ಬೆಳವಣಿಗೆ, 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಡೆದಿದೆ.

ಮೊದಲ ಅವಧಿ ಸರ್ಕಾರದಲ್ಲಿ ತನ್ನ ಏಕೈಕ ಮುಸ್ಲಿಂ ಮುಖವಾದ ಮೊಹ್ಸಿನ್ ರಝಾ ಅವರನ್ನು ಪಕ್ಷದ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಡ್ಯಾನಿಶ್ ಆಜಾದ್ ಅನ್ಸಾರಿಯೊಂದಿಗೆ ಬದಲಾಯಿಸಲಾಗಿದೆ.

ಆಜಾದ್ ಅವರನ್ನು ರಾಜ್ಯ ಸಚಿವರನ್ನಾಗಿ ನೇಮಿಸಲಾಗಿದೆ. ಅವರು, ರಾಂಪುರದ ಬಿಸಲ್ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಶಾಸಕರಾಗಿರುವ ಸಿಖ್ ರಾಜ್ಯ ಸಚಿವ ಬಲದೇವ್ ಔಲಾಖ್ ಅವರೊಂದಿಗೆ ಈಗ ಆದಿತ್ಯನಾಥ್ ಸರ್ಕಾರದ ಅಲ್ಪಸಂಖ್ಯಾತ ಮುಖಗಳಾಗಿರುತ್ತಾರೆ.

ಯೋಗಿ ಸರ್ಕಾರ 2.0 ಗರಿಷ್ಠ 60 ಸಚಿವರನ್ನು ಹೊಂದಬಹುದು. ಬಿಜೆಪಿ ಶಾಸಕಾಂಗ ಪಕ್ಷದ ಅತ್ಯಂತ ಹಿರಿಯ ಸದಸ್ಯ ಸುರೇಶ್ ಖನ್ನಾ ಅವರನ್ನು ಮತ್ತೆ ಸಂಪುಟ ಸಚಿವರನ್ನಾಗಿ ಮಾಡಲಾಗಿದೆ. ಅವರು ತಮ್ಮ ಒಂಬತ್ತನೇ ವಿಧಾನಸಭಾ ಚುನಾವಣೆಯಲ್ಲಿ ಷಹಜಹಾನ್‌ಪುರದಿಂದ ಗೆದ್ದರು. ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯಾಗಿ ಆದಿತ್ಯನಾಥ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು.

ಉತ್ತರಾಖಂಡದ ಮಾಜಿ ಗವರ್ನರ್ ಬೇಬಿ ರಾಣಿ ಮೌರ್ಯ ಕ್ಯಾಬಿನೆಟ್ ಸಚಿವರನ್ನಾಗಿ ನೇಮಿಸಲಾಗಿದೆ. ಅವರು ಆಗ್ರಾ ಗ್ರಾಮಾಂತರ ಕ್ಷೇತ್ರದಿಂದ ತಮ್ಮ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು.

ಬಿಜೆಪಿಯ ಮಿತ್ರಪಕ್ಷಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ. ಅಪ್ನಾ ದಳ(ಸೋನೆಲಾಲ್) ನಾಯಕ ಆಶಿಶ್ ಪಟೇಲ್, ಎಂಎಲ್‌ಸಿ ಮತ್ತು ಕೇಂದ್ರ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರ ಪತಿ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿ ಮಾಡಲಾಗಿದೆ. ನಿಶಾದ್ ಪಕ್ಷದ ಮುಖ್ಯಸ್ಥ ಸಂಜಯ್ ನಿಶಾದ್ ಕೂಡ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...