ಮನುಕುಲದ ವಿವಿಧ ಜನಾಂಗಗಳಲ್ಲಿ ಪ್ರತಿನಿತ್ಯದ ಜೀವನದಿಂದ ಹಿಡಿದು ಮದುವೆಗಳ ಆಚರಣೆಗಳವರೆಗೂ ಥರಾವರಿ ಸಂಪ್ರದಾಯಗಳಿವೆ. ಕೆನ್ಯಾದ ಬುಡಕಟ್ಟೊಂದರ ಮಂದಿಯಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವಿದೆ.
ಮದುಮಗಳಿಗೆ ಗಂಡನ ಮನೆಗೆ ಬೀಳ್ಕೊಡುವ ಸಂದರ್ಭದಲ್ಲಿ ಆಕೆಯ ಮುಖದ ಮೇಲೆ ಉಗುಳುವ ಮೂಲಕ ಆಕೆಯ ತಂದೆ ಕಳುಹಿಸಿಕೊಡುತ್ತಾರೆ. ಈ ರೀತಿ ಮಾಡುವ ಮೂಲಕ ತಮ್ಮ ಹೆಣ್ಣುಮಕ್ಕಳನ್ನು ಬೀಳ್ಕೊಡುತ್ತಾರೆ ಈ ಬುಡಕಟ್ಟು ಜನಾಂಗದ ಮಂದಿ.
ಮನೆಯಲ್ಲೇ ಮಾಡಿ ಬಾಯಲ್ಲಿ ನೀರೂರಿಸುವ ಕಾಜು ಕರಿ
ಈ ವಿಚಿತ್ರದ ಪದ್ಧತಿಯು ಕೆನ್ಯಾ ಮತ್ತು ತಾಂಜ಼ಾನಿಯಾದ ಮಸಾಯಿ ಬುಡಕಟ್ಟು ಜನಾಂಗದಲ್ಲಿ ಆಚರಣೆಯಲ್ಲಿದೆ.
ಮದುವೆ ವೇಳೆ ಮದುಮಗನ ಕುಟುಂಬಕ್ಕೆ ವರದಕ್ಷಿಣೆ ಕೊಟ್ಟ ಬಳಿಕ ಮದುಮಗಳ ತಲೆಯನ್ನು ಬೋಳಿಲಾಗುತ್ತದೆ. ಈ ಪದ್ಧತಿಯ ಸಂದರ್ಭದಲ್ಲಿ ಮದುಮಗಳ ಮೇಲೆ ಉಗುಳುವ ಸಂಪ್ರದಾಯ ಆಚರಿಸಲಾಗುತ್ತದೆ.