ನವದೆಹಲಿ: ಸುಪ್ರೀಂ ಕೋರ್ಟ್ನಿಂದ ದೋಷಿ ಎಂದು ಘೋಷಿತರಾಗುವ ಎರಡು ಗಂಟೆ ಮೊದಲು ಪಂಜಾಬ್ ಪ್ರದೇಶ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಆನೆ ಸವಾರಿ ಮಾಡಿದ್ದರು, ಪಟಿಯಾಲಾದ ಕಿರಿದಾದ ಮಾರ್ಗಗಳ ಮೂಲಕ “ಹಣದುಬ್ಬರದ ವಿರುದ್ಧ ಸಾಂಕೇತಿಕ ಪ್ರತಿಭಟನೆ” ಯ ರೂಪವಾಗಿ ಈ ಆನೆ ಸವಾರಿ ಮಾಡಿದರು.
ಇದಾಗಿ ಎರಡು ಗಂಟೆ ಬಳಿಕ, 65 ವರ್ಷದ ವ್ಯಕ್ತಿ ಮೃತಪಟ್ಟ ಮೂರು ದಶಕ ಹಳೆಯ ಗಲಭೆ ಪ್ರಕರಣದಲ್ಲಿ ನವಜೋತ್ ಸಿಂಗ್ ಸೀಧು ದೋಷಿ ಎಂದು ಸುಪ್ರೀಂ ಕೋರ್ಟ್ ಘೋಷಿಸಿತು.
ಪ್ರತಿಭಟನೆ ನಡೆಸಲು ಸಿಧು ಒಂದು ದಿನ ಮುಂಚಿತವಾಗಿಯೇ ಯೋಜನೆ ರೂಪಿಸಿದ್ದರು. ಇದರಲ್ಲಿ ಭಾಗವಹಿಸಲು ಪಕ್ಷದೊಳಗಿನ ತಮ್ಮ ಬೆಂಬಲಿಗರನ್ನು ಕರೆದಿದ್ದರು. ಹರ್ದಯಾಲ್ ಸಿಂಗ್ ಕಾಂಬೋಜ್ ಮತ್ತು ರಾಜಿಂದರ್ ಸಿಂಗ್ ಸೇರಿ ಕೆಲವು ಮಾಜಿ ಶಾಸಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. “ಬೆಲೆ ಏರಿಕೆಯ ವಿರುದ್ಧ ಆನೆ ಪ್ರತಿಭಟನೆ” ಎಂಬ ಬೃಹತ್ ಬ್ಯಾನರ್ನೊಂದಿಗೆ ಸಿಧು ಕಿರಿದಾದ ಹಾದಿಗಳಲ್ಲಿ ಆನೆ ಸವಾರಿ ಮಾಡಿದರು. ಬಿಳಿ ಕುರ್ತಾ-ಪೈಜಾಮಾ ಮತ್ತು ಕೇಸರಿ ಪೇಟವನ್ನು ಸಿಧು ಧರಿಸಿದ್ದರೆ, ಅವರು ಏರಿದ ಆನೆಗೂ ಕೇಸರಿ ಬಟ್ಟೆ ಹೊದಿಸಲಾಗಿತ್ತು.
ಅವರು ಆನೆ ಸವಾರಿ ಮಾಡುವವರೆಗೆ ಮಾತ್ರ ಅವರೊಂದಿಗೆ ಇದ್ದೆವು. ನಂತರ ನಾವು ಹಿಂತಿರುಗಿದೆವು. ನ್ಯಾಯಾಲಯ ಶಿಕ್ಷೆ ವಿಧಿಸಿದಾಗ ನಾವು ಅವರೊಂದಿಗೆ ಇರಲಿಲ್ಲ. ಪ್ರತಿಭಟನೆಯು ಬೆಳಗ್ಗೆ 11-11.30 ರ ಸುಮಾರಿಗೆ ಮತ್ತು ಮಧ್ಯಾಹ್ನ 1 ಗಂಟೆಯ ನಂತರ ಶಿಕ್ಷೆ ಘೋಷಣೆಯಾಗಿತ್ತು ಎಂದು ಹರ್ದಯಾಲ್ ಸಿಂಗ್ ಕಾಂಬೋಜ್ ಹೇಳಿದರು.
8 ವಾರಗಳಲ್ಲಿ ವಾರ್ಡ್ ಪುನರ್ ವಿಂಗಡಿಸಿ ಚುನಾವಣೆ ನಡೆಸಿ; BBMP ಎಲೆಕ್ಷನ್ ಗೆ ಸುಪ್ರೀಂ ಸೂಚನೆ
ತೊಂಬತ್ತು ಪ್ರತಿಶತ ಪಂಜಾಬಿಗಳು ಮತ್ತು ಭಾರತೀಯರು ಉಳಿವಿಗಾಗಿ ಗಳಿಸುವ ಹೋರಾಟವನ್ನು ಹೊಂದಿರುವುದರಿಂದ ಬೆಲೆ ಏರಿಕೆಯ ವಿರುದ್ಧ ಪ್ರತಿಭಟಿಸುತ್ತಿದ್ದೇನೆ. ಸಾರಿಗೆ, ಆಹಾರ ಪದಾರ್ಥಗಳು, ನಿರ್ಮಾಣ ಅಥವಾ ವಸತಿ, ಆರೋಗ್ಯ ಸೌಲಭ್ಯದಿಂದ ಪ್ರಾರಂಭಿಸಿ ಎಲ್ಲವೂ ಏರಿದೆ. ಆದರೆ ಬಡವರ ಕೂಲಿ ದಿನವೊಂದಕ್ಕೆ 250 ರೂ. ಶ್ರೀಮಂತರು ಬಳಲುವುದಿಲ್ಲ.
ಆದರೆ ದಿನನಿತ್ಯ ಕಚೇರಿಗೆ ದುಡಿಯಲು ಹೋಗುವವರ ಬಜೆಟಿಗೆ ತಲೆಕೆಡಿಸಿಕೊಳ್ಳುತ್ತಾರೆ. ಚಿಕನ್ 130 ರೂ.ಗೆ ಲಭ್ಯವಿದ್ದು, ದಾಲ್ 120 ರೂ. ಖಾದ್ಯ ತೈಲ 75ರಿಂದ 180ಕ್ಕೆ ಏರಿಕೆಯಾಗಿದೆ. ಎಲ್ ಪಿ ಜಿ ಸಿಲಿಂಡರ್ 400 ರೂ.ಗೆ ಇತ್ತು ಈಗ 1000 ರೂ.ಗೆ ಏರಿಕೆಯಾಗಿದೆ. ಪೆಟ್ರೋಲ್, ಡೀಸೆಲ್ ಶೇ.100ರಷ್ಟು ಏರಿಕೆಯಾಗಿದೆ. ದಿನಕ್ಕೆ 250 ರೂ.ಗಳನ್ನು ಗಳಿಸುವವರನ್ನು ಊಹಿಸಿಕೊಳ್ಳಿ. ಅವರ ಅಡುಗೆ ಮನೆಗೆ ದಿನಕ್ಕೆ 800 ರೂ. ಬೇಕು ಅದಕ್ಕಾಗಿಯೇ ನಾನು ಈ ರೀತಿಯ ಪ್ರತಿಭಟನೆಗೆ ಇಳಿದಿದ್ದೇನೆ ಎಂದು ಸಿಧು ಹೇಳಿದರು.