ದಿನೇ ದಿನೇ ಕ್ಷೀಣಿಸುತ್ತಿರುವ ಅಂತರ್ಜಲದ ಸಮಸ್ಯೆಗೆ ತಮ್ಮಿಂದಲೇ ಪರಿಹಾರ ಕಂಡುಕೊಳ್ಳಲು ಮುಂದಾದ ರಾಜಸ್ತಾನದ ಬುಂದಿ ಜಿಲ್ಲೆಯ ನೈನ್ವಾ ಉಪವಿಭಾಗದ 13 ಗ್ರಾಮಗಳ ಮಂದಿ 45 ಲಕ್ಷ ರೂಪಾಯಿ ಸಂಗ್ರಹಿಸಿ 2050 ಅಡಿ ಉದ್ದದ ಕಿರು ಅಣೆಕಟ್ಟೊಂದನ್ನು ನಿರ್ಮಿಸಿದ್ದಾರೆ.
ಈ ಅಣೆಕಟ್ಟೆಯನ್ನು 29 ದಿನಗಳಲ್ಲಿ ನಿರ್ಮಿಸಲಾಗಿದ್ದು, 13 ಗ್ರಾಮಗಳ ಗ್ರಾಮಸ್ಥರು ಹಗಲು ಇರುಳು ಎನ್ನದೇ ಶ್ರಮ ಹಾಕಿ ಕಟ್ಟಿದ್ದಾರೆ. 80 ಅಡಿ ಅಗಲ ಹಾಗೂ 29 ಅಡಿ ಎತ್ತರದ ಈ ಅಣೆಕಟ್ಟೆಯನ್ನು ಸರ್ಕಾರದ ನೆರವಿಲ್ಲದೇ, ಬಾಮನ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿದೆ.
ಅಣೆಕಟ್ಟೆ ನಿರ್ಮಾಣಕ್ಕಾಗಿ ಸ್ಥಳೀಯ ರೈತರು 56 ಹೆಕ್ಟೇರ್ ಭೂಮಿಯನ್ನು ದಾನ ಮಾಡಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ..! ಭಾರತ-ಪಾಕ್ ಮಧ್ಯೆ ನಡೆಯಲಿದೆ ಪಂದ್ಯ
ಅಂತರ್ಜಲ ಮಟ್ಟವು 800 ಅಡಿಗಿಂತ ಕೆಳಗೆ ಕುಸಿದಿರುವ ಕಾರಣ ಬಾಮನ್ ಪ್ರದೇಶವನ್ನು ಒಣ ಪ್ರದೇಶವೆಂದು ಘೋಷಿಸಲಾಗಿದೆ. ಈ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಭಾರೀ ಪರದಾಟವಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಬೇಸತ್ತ ಈ ಗ್ರಾಮಸ್ಥರು ತಮ್ಮದೇ ಪರಿಶ್ರಮದಲ್ಲಿ ಪರಿಹಾರ ಕಂಡುಕೊಂಡಿದ್ದಾರೆ.
ದೇವಸ್ಥಾನವೊಂದರ ನಿರ್ಮಾಣಕ್ಕೆಂದು ಇಡಲಾಗಿದ್ದ 19 ಲಕ್ಷ ರೂಪಾಯಿಗಳೊಂದಿಗೆ, ಸಾಸಿವೆ ಮಾರಿ ಸಿಕ್ಕ 15 ಲಕ್ಷ ಸೇರಿಸಿಕೊಂಡ ಗ್ರಾಮಸ್ಥರು ಮಿಕ್ಕ 11 ಲಕ್ಷ ರೂಪಾಯಿಗಳನ್ನು ತಮ್ಮ ತಮ್ಮಲ್ಲೇ ದೇಣಿಗೆ ರೂಪದಲ್ಲಿ ಸಂಗ್ರಹಿಸಿಕೊಂಡಿದ್ದಾರೆ.
ಯಾವುದೇ ಇಂಜಿನಿಯರ್ ನೆರವಿಲ್ಲದೇ, 6 ಜೆಸಿಬಿ ಯಂತ್ರಗಳು ಹಾಗೂ 46 ಟ್ರಾಕ್ಟರ್‌ಗಳ ನೆರವಿನಿಂದ ಈ ಅಣೆಕಟ್ಟೆಯನ್ನು ನಿರ್ಮಿಸಿದ್ದಾರೆ ಗ್ರಾಮಸ್ಥರು.