
ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಫಲಿತಾಂಶದ ಬಳಿಕ ನಿರಾಸೆ ಅನುಭವಿಸಿದ್ದರೂ ಸಹ ತಮ್ಮ ಸ್ನೇಹಿತ ಮಹೇಂದ್ರ ಸಿಂಗ್ ಧೋನಿ ಜೊತೆ ಜಾಲಿ ಮಾಡುವುದನ್ನು ಮರೆಯಲಿಲ್ಲ.
ಪಂದ್ಯ ಮುಕ್ತಾಯದ ಬಳಿಕ ಧೋನಿ ತಮ್ಮ ತಂಡದ ಸದಸ್ಯರ ಜೊತೆ ಮಾತನಾಡುತ್ತಿದ್ದ ವೇಳೆ ಹಿಂಬದಿಯಿಂದ ಕೊಹ್ಲಿ, ಧೋನಿಯನ್ನು ಆಲಂಗಿಸಿಕೊಂಡಿದ್ದಾರೆ.
ಈ ಅದ್ಭುತ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ಅಭಿಮಾನಿಗಳು ಕಟ್ಟಾ ವೈರಿಗಳಂತೆ ವರ್ತಿಸಿದ್ರೂ ಸಹ ಎರಡೂ ತಂಡ ನಾಯಕರ ನಡುವಿನ ಈ ವಿಶೇಷವಾದ ಬಾಂಡ್ ಅಭಿಮಾನಿಗಳ ಕೋಪವನ್ನು ಕೊಂಚ ಕಡಿಮೆ ಮಾಡಿದ್ದಂತೂ ಸುಳ್ಳಲ್ಲ.