alex Certify ಮಾಲ್ಡೀವ್ಸ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಮೋಜು-ಮಸ್ತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಲ್ಡೀವ್ಸ್‌ನಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಮೋಜು-ಮಸ್ತಿ

ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಬಾಲಿವುಡ್‌ ತಾರೆಯರ ನೆಚ್ಚಿನ ವಿಹಾರ ತಾಣವಾಗಿದೆ ಅಂತಾನೇ ಹೇಳಬಹುದು. ಯಾಕೆಂದ್ರೆ ಬಾಲಿವುಡ್ ನ ಪ್ರಸಿದ್ಧ  ನಟ-ನಟಿಯರು ಮಾಲ್ಡೀವ್ಸ್ ನಲ್ಲಿ ಆಗಾಗ್ಗೆ ಮೋಜು-ಮಸ್ತಿ ಮಾಡುತ್ತಿರುತ್ತಾರೆ.

ಇದೀಗ ಬಚ್ಚನ್‌ ಫ್ಯಾಮಿಲಿ ಕೂಡ ದ್ವೀಪ ರಾಷ್ಟ್ರದಲ್ಲಿ ತಮ್ಮ ರಜಾದಿನವನ್ನು ಕಳೆದಿದ್ದಾರೆ. ಇತ್ತೀಚೆಗೆ ನಟ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ತಮ್ಮ ಮಗಳು ಆರಾಧ್ಯ ಅವರೊಂದಿಗೆ ಮಾಲ್ಡೀವ್ಸ್‌ ನಲ್ಲಿ ಸಮಯ ಕಳೆದಿದ್ದಾರೆ. ಐಶ್ವರ್ಯಾ ಹಾಗೂ ಅಭಿಷೇಕ್ ಕೆಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರನ್ನು ಬೆರಗುಗೊಳಿಸಿದೆ.

ಅಭಿಷೇಕ್ ಬಚ್ಚನ್ ತಮ್ಮ ಬೆಳಗಿನ ನೋಟ ಹೇಗಿರುತ್ತದೆ ಎಂಬುದರ ಚಿತ್ರಣದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಂಪತಿಗಳು ಹಂಚಿಕೊಂಡ ಫೋಟೋ ನೋಡಿದ ನೆಟ್ಟಿಗರು ವ್ಹಾವ್ ಎಂದು ಉದ್ಘಾರ ಮಾಡಿದ್ದಾರೆ. ತಾವು ತಂಗಿದ್ದ ಕೊಠಡಿಯಿಂದ ಶಾಂತ ಸಾಗರದ ಫೋಟೋವನ್ನು ಅಭಿಷೇಕ್ ಹಂಚಿಕೊಂಡಿದ್ದಾರೆ.

ಇನ್ನು ಮತ್ತೊಂದು ಕಡೆಯಿಂದ ಕ್ಲಿಕ್ಕಿಸಿರುವ ಫೋಟೋವನ್ನು ಮಾಜಿ ವಿಶ್ವಸುಂದರಿ ಹಂಚಿಕೊಂಡಿದ್ದಾರೆ. ತಾಳೆ ಮರಗಳು, ಬೀಚ್ ಜೊತೆಗೆ ಎರಡು ಈಜುಕೊಳಗಳು ಒಂದಕ್ಕೊಂದು ಹೊಂದಿಕೊಂಡಂತೆ ಇರುವ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಬಾಲಿವುಡ್ ತಾರಾ ದಂಪತಿ ತಮ್ಮ ಪುತ್ರಿಯೊಂದಿಗೆ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...