ಬೆಂಗಳೂರು: ಕೊರೊನಾ ಎರಡನೇ ಅಲೆ ನಡುವೆಯೇ ಬ್ಲ್ಯಾಕ್ ಫಂಗಸ್, ವೈಟ್ ಫಂಗಸ್, ಯಲ್ಲೋ ಫಂಗಸ್ ಆತಂಕ ಎದುರಾಗಿದೆ. ಇದರ ಬೆನ್ನಲ್ಲೇ ಇದೀಗ ಮಲೇಷ್ಯಾದಲ್ಲಿ ಹೊಸ ಬಗೆಯ ಕೊರೊನಾ ವೈರಸ್ ಪತ್ತೆಯಾಗಿದ್ದು, ನಾಯಿಗಳಲ್ಲಿ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.
ಇದೊಂದು ಹೊಸಬಗೆಯ ಕೊರೊನಾ ವೈರಸ್ ಆಗಿದ್ದು, ಮಲೇಷ್ಯಾದಲ್ಲಿ ನಾಯಿಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಸಾರ್ಸ್ ಹಾಗೂ ಕೋವಿಡ್ – 19 ಬಳಿಕ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ 8ನೇ ವೈರಸ್ ಇದಾಗಿದೆ. ಅಷ್ಟೇ ಅಲ್ಲ ನಾಯಿಗಳಿಂದ ಮನುಷ್ಯರಿಗೆ ಹರಡುವ ಮೊದಲ ಸೋಂಕು ಇದಾಗಿದೆ ಎಂದು ವರದಿ ತಿಳಿಸಿದೆ.
ಸಾಂಕ್ರಾಮಿಕ ರೋಗ ತಜ್ಞ ಗ್ರೆಗೊರಿ ಗ್ರೆ ಎಂಬುವವರು ತಮ್ಮ ಲ್ಯಾಬ್ ವಿದ್ಯಾರ್ಥಿಗಳಿಗೆ ಅಸ್ತಿತ್ವದಲ್ಲಿದ್ದರೂ ಪತ್ತೆಯಾಗದೇ ಇರುವ ವೈರಸ್ ಗಳ ಬಗ್ಗೆ ಸಂಶೋಧನೆ ನಡೆಸಲು ಸೂಚಿಸಿದ್ದರು. ಅದರಂತೆ ಸಂಶೋಧನೆ ನಡೆಸಿದಾಗ ಕೊರೊನಾ ಹೊಸ ಬಗೆಯ ವೈರಸ್ ನಾಯಿಗಳಲ್ಲಿ ಪತ್ತೆಯಾಗಿದೆ. ಅಲ್ಲದೇ ಈ ವೈರಸ್ ಹಲವು ವರ್ಷಗಳ ಹಿಂದೆಯೇ ಬೆರಳೆಣಿಕೆಯಷ್ಟು ಜನರಿಗೆ ನಾಯಿಗಳಿಂದ ಹರಡಿತ್ತು ಎಂಬುದನ್ನು ಕಂಡುಹಿಡಿದಿದ್ದಾರೆ. ಅಲ್ಲದೇ ನಾಯಿಗಳಲ್ಲಿ ಕೊರೊನಾ ವೈರಸ್ ಹರಡಿದ ಬಗ್ಗೆ ಅಮೇರಿಕಾದ ತಜ್ಞರು ಕೂಡ ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.