alex Certify ‌ʼಲಾಕ್‌ ಡೌನ್ʼ ಸಂಕಷ್ಟದಲ್ಲಿರುವವರಿಗೆ ಉಚಿತ ಬಿರಿಯಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಲಾಕ್‌ ಡೌನ್ʼ ಸಂಕಷ್ಟದಲ್ಲಿರುವವರಿಗೆ ಉಚಿತ ಬಿರಿಯಾನಿ

ಪಶ್ಚಿಮ ಬಂಗಾಳದ ಎಡಪಂಥೀಯ ರಾಜಕೀಯ ಪಕ್ಷಗಳಲ್ಲಿ ಒಂದಾದ ಫಾರ್ವಡ್​ ಬ್ಲಾಕ್​ ಪಕ್ಷ ನಗರದ ಹಿಂದುಳಿದ ಜನರಿಗೆ ಉಚಿತ ಬಿರಿಯಾನಿ ನೀಡುವ ಕೆಲಸ ಮಾಡ್ತಿದೆ.

ಕೊಲ್ಕತ್ತಾ ನಗರದ 29 ಹಾಗೂ 30ನೇ ವಾರ್ಡ್​ನಲ್ಲಿ ಪ್ರತಿ ದಿನ 500ಕ್ಕೂ ಹೆಚ್ಚು ಮಂದಿ ಬಿರಿಯಾನಿ ಊಟವನ್ನ ಉಚಿತವಾಗಿ ನೀಡುತ್ತಿದೆ ಎನ್ನಲಾಗಿದೆ.

ಫಾರ್ವಡ್​ ಬ್ಲಾಕ್​​ನ 82ನೇ ಫೌಂಡೇಶನ್​ ವಾರ್ಷಿಕೋತ್ಸವದ ಅಂಗವಾಗಿ ಆಜಾದ್​ ಹಿಂದ್​ ಕಾರ್ಯಕರ್ತರು ಜೂನ್​ 22 ರಿಂದ ಬಿರಿಯಾನಿ ಸೇವೆ ನೀಡುತ್ತಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕೊಲ್ಕತ್ತಾ ಜಿಲ್ಲಾ ಮಟ್ಟದ ಪಕ್ಷದ ಆಡಳಿತಾಧಿಕಾರಿ ಸುದೀಪ್​ ಬಂದೋಪಾಧ್ಯಾಯ, ಲಾಕ್​ಡೌನ್​ ಅವಧಿಯಲ್ಲಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಅನೇಕರು ತಮ್ಮ ಉದ್ಯೋಗವನ್ನ ಕಳೆದುಕೊಂಡಿದ್ದಾರೆ. ಮನೆಯಿಂದ ಹೊರ ಹೋದರೆ ಕೊರೊನಾ ಸೋಂಕಿನ ಭಯವಿದೆ. ಮನೆಯಲ್ಲೇ ಉಳಿದರೆ ಹಸಿವಿನಿಂದ ಸಾಯಬೇಕು. ಇದೇ ಕಾರಣಕ್ಕೆ ನಾವು ಜನರಿಗೆ ಉಚಿತ ಊಟ ನೀಡ್ತಿದ್ದೇವೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...