ಪಶ್ಚಿಮ ಬಂಗಾಳದ ಎಡಪಂಥೀಯ ರಾಜಕೀಯ ಪಕ್ಷಗಳಲ್ಲಿ ಒಂದಾದ ಫಾರ್ವಡ್ ಬ್ಲಾಕ್ ಪಕ್ಷ ನಗರದ ಹಿಂದುಳಿದ ಜನರಿಗೆ ಉಚಿತ ಬಿರಿಯಾನಿ ನೀಡುವ ಕೆಲಸ ಮಾಡ್ತಿದೆ.
ಕೊಲ್ಕತ್ತಾ ನಗರದ 29 ಹಾಗೂ 30ನೇ ವಾರ್ಡ್ನಲ್ಲಿ ಪ್ರತಿ ದಿನ 500ಕ್ಕೂ ಹೆಚ್ಚು ಮಂದಿ ಬಿರಿಯಾನಿ ಊಟವನ್ನ ಉಚಿತವಾಗಿ ನೀಡುತ್ತಿದೆ ಎನ್ನಲಾಗಿದೆ.
ಫಾರ್ವಡ್ ಬ್ಲಾಕ್ನ 82ನೇ ಫೌಂಡೇಶನ್ ವಾರ್ಷಿಕೋತ್ಸವದ ಅಂಗವಾಗಿ ಆಜಾದ್ ಹಿಂದ್ ಕಾರ್ಯಕರ್ತರು ಜೂನ್ 22 ರಿಂದ ಬಿರಿಯಾನಿ ಸೇವೆ ನೀಡುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಕೊಲ್ಕತ್ತಾ ಜಿಲ್ಲಾ ಮಟ್ಟದ ಪಕ್ಷದ ಆಡಳಿತಾಧಿಕಾರಿ ಸುದೀಪ್ ಬಂದೋಪಾಧ್ಯಾಯ, ಲಾಕ್ಡೌನ್ ಅವಧಿಯಲ್ಲಿ ಜನರು ಕಷ್ಟ ಅನುಭವಿಸುತ್ತಿದ್ದಾರೆ. ಅನೇಕರು ತಮ್ಮ ಉದ್ಯೋಗವನ್ನ ಕಳೆದುಕೊಂಡಿದ್ದಾರೆ. ಮನೆಯಿಂದ ಹೊರ ಹೋದರೆ ಕೊರೊನಾ ಸೋಂಕಿನ ಭಯವಿದೆ. ಮನೆಯಲ್ಲೇ ಉಳಿದರೆ ಹಸಿವಿನಿಂದ ಸಾಯಬೇಕು. ಇದೇ ಕಾರಣಕ್ಕೆ ನಾವು ಜನರಿಗೆ ಉಚಿತ ಊಟ ನೀಡ್ತಿದ್ದೇವೆ ಎಂದು ಹೇಳಿದ್ರು.