alex Certify ʼಕಾಂತಾರʼ ವೀಕ್ಷಣೆಗೆ ಬಂದ ಮುಸ್ಲಿಂ ವಿದ್ಯಾರ್ಥಿ – ವಿದ್ಯಾರ್ಥಿನಿ; ಅದೇ ಕೋಮಿನ ಯುವಕರಿಂದ ಹಲ್ಲೆಗೆ ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕಾಂತಾರʼ ವೀಕ್ಷಣೆಗೆ ಬಂದ ಮುಸ್ಲಿಂ ವಿದ್ಯಾರ್ಥಿ – ವಿದ್ಯಾರ್ಥಿನಿ; ಅದೇ ಕೋಮಿನ ಯುವಕರಿಂದ ಹಲ್ಲೆಗೆ ಯತ್ನ

ಕಾಂತಾರ ಸಿನಿಮಾ ನೋಡಲು ಬಂದ ಮುಸ್ಲಿಂ ವಿದ್ಯಾರ್ಥಿ – ವಿದ್ಯಾರ್ಥಿನಿ ಮೇಲೆ ಹಲ್ಲೆಗೆ ಯತ್ನಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪಟ್ಟಣದಲ್ಲಿ ಡಿಸೆಂಬರ್ 7 ರಂದು ಘಟನೆ ನಡೆದಿರೋ ಕುರಿತು ವರದಿಯಾಗಿದೆ. ಸಂತೋಷ್ ಚಿತ್ರಮಂದಿರದಲ್ಲಿ ಕಾಂತಾರ ಪ್ರದರ್ಶನವನ್ನು ವೀಕ್ಷಿಸಲು ಈ ವಿದ್ಯಾರ್ಥಿ – ವಿದ್ಯಾರ್ಥಿನಿ ಆಗಮಿಸಿದ್ದರು.

ಈ ವೇಳೆ ಕೆಲವು ಮುಸ್ಲಿಂ ಯುವಕರು ಚಿತ್ರ ನೋಡದಂತೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಬಳಿಕ ವಿದ್ಯಾರ್ಥಿ ಮೇಲೆ  ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ದಾಳಿಯ ಹಿಂದಿನ ಕಾರಣ ಸ್ಪಷ್ಟವಾಗದಿದ್ದರೂ ಕಾಂತಾರಾ ಸಿನಿಮಾ ಹಿಂದೂ ಸಂಪ್ರದಾಯದ ಸುತ್ತ ಸುತ್ತುವ ಚಿತ್ರವಾಗಿರೋದ್ರಿಂದ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿ ಚಲನಚಿತ್ರವನ್ನು ವೀಕ್ಷಿಸದಂತೆ ತಡೆಯಲು ಕಾರಣವಾಗಿರಬಹುದು ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...