alex Certify ಹೈ-ಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದ ವಾಹನಗಳನ್ನು ತುಂಬಿದ್ದ ಟ್ರಕ್: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈ-ಸ್ಪೀಡ್ ರೈಲಿಗೆ ಡಿಕ್ಕಿ ಹೊಡೆದ ವಾಹನಗಳನ್ನು ತುಂಬಿದ್ದ ಟ್ರಕ್: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್

In Horrifying Video, Truck Loaded With Vehicles Gets Hit By High-Speed Train - TheSpuzzಕಾರುಗಳನ್ನು ಹೊತ್ತೊಯ್ಯುತ್ತಿದ್ದ ಸೆಮಿ ಟ್ರಕ್ ಗೆ ರೈಲು ಡಿಕ್ಕಿ ಹೊಡೆದಿರುವ ಘಟನೆ ಅಮೆರಿಕದ ಒಕ್ಲಹೊಮಾದ ಥಾಕರ್‌ವಿಲ್ಲೆಯಲ್ಲಿ ನಡೆದಿದೆ. ಮೈ ಜುಮ್ಮೆನ್ಮಿಸುವ ವಿಡಿಯೋ ವೈರಲ್ ಆಗಿದೆ.

ರೈಲ್ರೋಡ್ ಕ್ರಾಸಿಂಗ್‌ನಲ್ಲಿ ಕಾರುಗಳನ್ನು ಸೆಮಿ ಟ್ರಕ್ ವೊಂದು ಸಾಗಿಸುತ್ತಿತ್ತು. ಭಾರಿ ಹೊರೆಯಿಂದಾಗಿ ಟ್ರಕ್ ಗೆ ರೈಲು ಹಳಿಯನ್ನು ದಾಟಲಾಗಿಲ್ಲ. ವಿಡಿಯೋವನ್ನು ಸರಿಯಾಗಿ ಗಮನಿಸಿದರೆ ಒಬ್ಬ ವ್ಯಕ್ತಿಯು ಲೋಕೋಮೋಟಿವ್ ಚಾಲಕನಿಗೆ ಸಿಗ್ನಲ್ ನೀಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಆದರೆ, ಇದು ಫಲಪ್ರದವಾಗಿಲ್ಲ. ಅಪಘಾತದ ರಭಸಕ್ಕೆ ಸೆಮಿ ಟ್ರಕ್ ಹಾಗೂ ಕಾರುಗಳು ಹಾರಿ ಹೋಗಿವೆ.

ಲವ್ ಕೌಂಟಿ ಅಗ್ನಿಶಾಮಕ ದಳದವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಪ್‌ಡೇಟ್ ಪ್ರಕಾರ, ಆಮ್ಟ್ರಾಕ್ ರೈಲಿನಲ್ಲಿದ್ದ ಐವರು ಪ್ರಯಾಣಿಕರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲಿನ ಮುಂಭಾಗವು ಕೂಡ ಸ್ವಲ್ಪ ಹಾನಿಗೊಂಡಿದೆ ಎಂದು ಹೇಳಲಾಗಿದೆ.

ಈ ವಿಡಿಯೋ ಹಲವರನ್ನು ಬೆಚ್ಚಿ ಬೀಳಿಸಿದೆ. ಅಪಘಾತದ ತೀವ್ರತೆ ಕಂಡು ಟ್ರಕ್ ಚಾಲಕನೊಂದಿಗೆ ಬಳಕೆದಾರರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...