alex Certify ಒತ್ತಡ ಕಡಿಮೆ ಮಾಡಲು ಆರಂಭವಾಗಿದೆ ʼಮ್ಯೂಸಿಯಂ ಥೆರಪಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒತ್ತಡ ಕಡಿಮೆ ಮಾಡಲು ಆರಂಭವಾಗಿದೆ ʼಮ್ಯೂಸಿಯಂ ಥೆರಪಿʼ

ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲು ಮ್ಯೂಸಿಯಂಗೆ ಹೋಗಬೇಕೇ ? ಈ ಕಲ್ಪನೆಯು ಆಶ್ಚರ್ಯಕರವೆಂದು ತೋರುತ್ತದೆ, ಆದರೆ ಆ ಪ್ರಯತ್ನ ಬೆಲ್ಜಿಯಂನಲ್ಲಿ ನಡೆದಿದೆ.

ಖಿನ್ನತೆ, ಆತಂಕ ಅಥವಾ ಒತ್ತಡದಿಂದ ಬಳಲುತ್ತಿರುವ ತಮ್ಮ ರೋಗಿಗಳಿಗೆ ಚಿಕಿತ್ಸಕ ಉದ್ದೇಶಗಳಿಗಾಗಿ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಸಲಹೆ ನೀಡುವ ಸಂದರ್ಭಗಳು ಮುಂದೆ ಬರಲೂ ಬಹುದು.

ಆರು ತಿಂಗಳ ಈ ಪ್ರಾಯೋಗಿಕ ಯೋಜನೆಯು ಬ್ರಗ್​ಮನ್​ ಯೂನಿವರ್ಸಿಟಿ ಆಸ್ಪತ್ರೆಯ ಮನೋವೆೈದ್ಯರು ತಮ್ಮ ರೋಗಿಗಳನ್ನು ಬೆಲ್ಜಿಯಂ ರಾಜಧಾನಿಯಲ್ಲಿರುವ ಅನೇಕ ವಸ್ತುಸಂಗ್ರಹಾಲಯಗಳಲ್ಲಿ ಒಂದಕ್ಕೆ ಕಳುಹಿಸಿಕೊಡುತ್ತಿದ್ದಾರೆ.

ಈ ಮ್ಯೂಸಿಯಂ ಪ್ರಿಸ್ಕ್ರಿಪ್ಷನ್​ಗಳು ರೋಗಿಗಳಿಗೆ ಕೆಲವು ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಉಚಿತ ಪ್ರದರ್ಶನವನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಅಲ್ಲಿನ ಮನೋವೈದ್ಯರು ತಮ್ಮ ಬಳಿ ಬರುವ ರೋಗಿಗಳನ್ನು ಫ್ಯಾಶನ್​ ಮತ್ತು ಲೇಸ್​ ಮ್ಯೂಸಿಯಂ, ಸೀವರ್​ ಮ್ಯೂಸಿಯಂ, ಗಾರ್ಡೆರೋಬ್​ ಮನ್ನೆಕೆನ್​ಪಿಸ್​ ಮ್ಯೂಸಿಯಂ ಅಥವಾ ಸೆಂಟ್ರೇಲ್​ ಫಾರ್​ ಕಾಂಟೆಂಪರರಿ ಆರ್ಟ್​ಗೆ ಕಳಿಸಿಕೊಡುತ್ತಿದ್ದಾರೆ.

ಈ ಕ್ರಮವು ಮೆಡಿಸಿನ್ಸ್​ ಫ್ರಾಂಕೋಫೋನ್ಸ್​ ಡು ಕೆನಡಾ ಎಂಬ ಫ್ರೆಂಚ್​ ವೆೈದ್ಯರ ಸಂಸ್ಥೆಯಿಂದ ಪ್ರಾರಂಭಿಸಲಾದ ಕೆನಡಿಯನ್​ ಕಾರ್ಯಕ್ರಮದಿಂದ ಪ್ರೇರಿತವಾಗಿದೆ. ಇದು ತನ್ನ ಸಾವಿರಾರು ಸದಸ್ಯ ವೆೈದ್ಯರಿಗೆ ಖಿನ್ನತೆ, ಮಧುಮೇಹ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ತಮ್ಮ ರೋಗಿಗಳನ್ನು ಮಾಂಟ್ರಿಯಲ್​ ಮ್ಯೂಸಿಯಂ ಆಫ್​ ಫೈನ್​ ಆರ್ಟ್ಸ್​ಗೆ ಉಚಿತವಾಗಿ ಕಳುಹಿಸಲು ಅವಕಾಶ ಮಾಡಿಕೊಟ್ಟಿತು. ಅಂದಿನಿಂದ ಇದು ಸ್ವಿಟ್ಜರ್ಲೆಂಡ್​ ಮತ್ತು ಫ್ರಾನ್ಸ್​ನಲ್ಲಿ ಇದೇ ರೀತಿಯ ಕ್ರಮಗಳು ಶುರುವಾಗಿವೆ.

ಕಲೆಯ ಬಹು ಚಿಕಿತ್ಸಕ ಗುಣಗಳನ್ನು ಹೊಂದಿದ್ದು, ಇದನ್ನು ‘ಮ್ಯೂಸಿಯಂ ಥೆರಪಿ’ ಎಂದು ಕರೆಯಲ್ಪಡುತ್ತದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಇತ್ತೀಚೆಗೆ ಕಲಾಕೃತಿಗಳೊಂದಿಗೆ ಸಂಪರ್ಕವು ಆತಂಕ ಮತ್ತು ಒತ್ತಡವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದ್ದಾರೆ.

ಮ್ಯೂಸಿಯಂ ಭೇಟಿಗಳು ಬುದ್ಧಿಮಾಂದ್ಯತೆಯ ವರ್ತನೆಯ ಮತ್ತು ಮಾನಸಿಕ ಲಕ್ಷಣಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಅಭಿಪ್ರಾಯಪಡಲಾಗಿದೆ.

ಆಸ್ಟ್ರೇಲಿಯನ್​ ಮತ್ತು ದಕ್ಷಿಣ ಆಫ್ರಿಕಾದ ಸಂಶೋಧಕರ ತಂಡವು ಈ ಸಾಂಸ್ಕೃತಿಕ ಚಿಕಿತ್ಸೆಗಳು ಬುದ್ಧಿಮಾಂದ್ಯತೆ ಹೊಂದಿರುವ ಜನರಲ್ಲಿ ಅರಿವಿನ ಕಾರ್ಯವನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿದಿದೆ.

ಈ ಚಟುವಟಿಕೆಯು ದೀರ್ಘಕಾಲದ ನೋವು ಮತ್ತು ಸಂಕಟವನ್ನು ಶಮನಗೊಳಿಸುತ್ತದೆ, ಜನರು ಉತ್ತಮ ಭಾವನೆಯನ್ನು ಪಡೆಯಲು ಸಾಧ್ಯವಾಗಬಹುದು ಎಂದು ಬ್ರಗ್​ಮನ್​ ಯೂನಿವಸಿರ್ಟಿ ಆಸ್ಪತ್ರೆಯ ಮನೋವೈದ್ಯರಾದ ಡಾ. ಜೋಹಾನ್​ ನೆವೆಲ್​ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...