alex Certify ʼಲವ್ ಜಿಹಾದ್ʼ ಕಾನೂನಿನಡಿಯಲ್ಲಿ ಮೊದಲ ಶಿಕ್ಷೆ ಪ್ರಕಟ…! ಆರೋಪಿ ಯುವಕನಿಗೆ 10 ವರ್ಷ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲವ್ ಜಿಹಾದ್ʼ ಕಾನೂನಿನಡಿಯಲ್ಲಿ ಮೊದಲ ಶಿಕ್ಷೆ ಪ್ರಕಟ…! ಆರೋಪಿ ಯುವಕನಿಗೆ 10 ವರ್ಷ ಜೈಲು

2020ರಲ್ಲಿ ಜಾರಿಯಾದ ಲವ್ ಜಿಹಾದ್ ಕಾನೂನಿನಡಿಯಲ್ಲಿ‌ ಮೊದಲ ಶಿಕ್ಷೆ ಪ್ರಕಟವಾಗಿದ್ದು, ಯುವಕನೋರ್ವನಿಗೆ ಹತ್ತು ವರ್ಷ ಜೈಲು ಹಾಗೂ 30 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. 2017ರಲ್ಲಿ ಜಾವೇದ್ ಎಂಬ ಮುಸ್ಲಿಂ ಯುವಕ ಮುನ್ನಾ ಎಂದು ಹೆಸರು ಬದಲಿಸಿಕೊಂಡು, ಹಿಂದು ಯುವತಿಯೋರ್ವಳನ್ನ ಬಲೆಗೆ ಬೀಳಿಸಿಕೊಂಡಿದ್ದ. ಪ್ರೀತಿಸಿದ ನಂತರ ಮದುವೆಯಾದ ಈ ಯುವತಿಗೆ ತನ್ನ ಗಂಡನ ಮನೆಗೆ ಹೋದ ಮೇಲೆ ಈತನ ನಿಜ ಸ್ವರೂಪ ತಿಳಿದದ್ದು.

ಉತ್ತರ ಪ್ರದೇಶದ ಪೊಲೀಸರ ಮಾಹಿತಿಯಂತೆ, ಗಂಡನ ಮನೆಗೆ ಹೋಗುತ್ತಿದ್ದಂತೆ ಆತ ತನ್ನ ನಿಜ ಸ್ವರೂಪ ತೋರಿಸಿದ್ದು, ಮುಸ್ಲಿಂ ಪದ್ಧತಿಯಂತೆ ನಿಖಾ ಮಾಡಿಕೊಳ್ಳಲು ಪೀಡಿಸಿದ್ದಾನೆ ಎಂದು ಹುಡುಗಿ ತಿಳಿಸಿದ್ದಾಳೆ. ಸದ್ಯ ಮೈನರ್ ಆಗಿರುವ ಈ ಹುಡುಗಿ ಆತ ತನ್ನನ್ನು ಅತ್ಯಾಚಾರ ಮಾಡಿದ್ದಾನೆ ಎಂದಿರುವುದರಿಂದ ಪೋಕ್ಸೊ ಕಾಯ್ದೆಯಡಿಯಲ್ಲೂ ಕೇಸ್ ದಾಖಲಿಸಿಕೊಳ್ಳಲಾಗಿದೆ‌‌.

ಉತ್ತರ ಪ್ರದೇಶದಲ್ಲಿ ಹೆಚ್ಚಾಗುತ್ತಿರುವ ಲವ್ ಜಿಹಾದ್ ಗಳನ್ನು ತಡೆಗಟ್ಟಲು, ಕಳೆದ ವರ್ಷ ಜಾರಿಯಾಗಿದ್ದ ಈ ಕಾನೂನಿನ ಪ್ರಕಾರ ಮದುವೆಯಾದ ಮೇಲೆ ಬಲವಂತವಾಗಿ ಕನ್ವರ್ಟ್ ಮಾಡಲು ಪ್ರಯತ್ನಿಸಿದ್ದರೆ ಮದುವೆಯನ್ನೆ ರದ್ದುಗೊಳಿಸಲಾಗುವುದು. ಆರೋಪ ಸಾಬೀತಾದಲ್ಲಿ ದಂಡ ಮತ್ತು ಜೈಲುವಾಸ ಕಟ್ಟಿಟ್ಟ ಬುತ್ತಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...