
ಕೆನಡಾದ 14ರ ಆಂಟಿನಿ ಮುಯೊಬೈಕ್‍ಗೆ ಬ್ಯಾಸ್ಕೆಟ್ ಬಾಲ್ ಎಂದರೆ ಪಂಚಪ್ರಾಣ. ಯಾವಾಗಲೂ ಟಿವಿಯಲ್ಲಿ ಅದನ್ನೇ ನೋಡುತ್ತಿರುವುದು, ಸ್ನೇಹಿತರೊಂದಿಗೆ ಅದನ್ನೇ ಚರ್ಚಿಸುವುದು ಮಾಡುತ್ತಿದ್ದ ಪೋರನ ಆಸೆಗೆ ನೆರೆಹೊರೆಯವರು ನೆರವಾಗಿದ್ದಾರೆ. ತಾತ್ಕಾಲಿಕ ಬಳಕೆಗೆ ಉಪಯೋಗಿಸುವ ಬ್ಯಾಸ್ಕೆಟ್ ಬಾಲ್‍ನ ನೆಟ್ ಕಂಬವನ್ನು ನೆರೆಯವರು ಆಂಟನಿಗೆ ಗಿಫ್ಟ್ ಕೊಟ್ಟಿದ್ದಾರೆ. ಅಲ್ಲದೆ, ಕಂಬವನ್ನು ಆತನ ಆಟಕ್ಕೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಬದಿಯಲ್ಲಿನ ಮನೆಯ ಎದುರಿನ ಪಾರ್ಕಿಂಗ್‍ನಲ್ಲಿ ನಿಲ್ಲಿಸಿಕೊಟ್ಟಿದ್ದಾರೆ ಕೂಡ.
ಪಾಕಿಸ್ತಾನದಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಮತ್ತೊಂದು ವಿಡಿಯೋ ವೈರಲ್
ಇನ್ನೇನು ನಿತ್ಯವೂ ಆಂಟನಿಗೆ ಬ್ಯಾಸ್ಕೆಟ್‍ಗೆ ಬಾಲ್ ಹಾಕುವುದೇ ಸಂಭ್ರಮವಾಗಿದೆ. ಈ ಬಗ್ಗೆ ಇಯಾನ್ ರೇ ಎನ್ನುವವರು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟರ್‍ನ Rex Chapman ಖಾತೆಯಲ್ಲಿ ಬಾಲಕನ ಬ್ಯಾಸ್ಕೆಟ್‍ಬಾಲ್ ಆಟದ ವಿಡಿಯೊ ಕಾಣಬಹುದಾಗಿದೆ.