alex Certify ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…!

ದೆಹಲಿ ಪೊಲೀಸರು 1861ರಲ್ಲಿ ಸಲ್ಲಿಸಿದ್ದ ಪ್ರಾಥಮಿಕ ತನಿಖಾ ವರದಿ(ಎಫ್​ಐಆರ್​​) ಪ್ರತಿಯೊಂದು ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಅಂದಹಾಗೆ ಇದು ದೆಹಲಿ ಪೊಲೀಸರಿಂದ ಮೊದಲ ಬಾರಿಗೆ ಸಲ್ಲಿಕೆಯಾದ ಎಫ್​ಐಆರ್​ ಆಗಿದ್ದು, ಉರ್ದು ಭಾಷೆಯಲ್ಲಿದೆ.

ಥಿಂಕ್​ ಟ್ಯಾಂಕ್​ ಹಾಗೂ ಸ್ಟ್ರಾಟೆಜಿಕ್​ ಕನ್ಸಲ್ಟೆನ್ಸಿ ಡೀಪ್​​ ಸ್ಟ್ರಾಟ್​​​ ಚೇರ್​ ಮನ್ ಯಶೋವರ್ಧನ್​ ಆಜಾದ್​​ ಟ್ವಿಟರ್​ನಲ್ಲಿ ಈ ಫೋಟೋವನ್ನು ಶೇರ್​ ಮಾಡಿದ್ದಾರೆ. ಈ ಫೋಟೋವನ್ನು 2017ರಲ್ಲಿ ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿದ್ದರು.

ದೆಹಲಿ ಪೊಲೀಸ್​ ಇಲಾಖೆಯ ಇತಿಹಾಸದ ಅಪರೂಪದ ಕ್ಷಣಗಳು ಎಂದು ದೆಹಲಿ ಪೊಲೀಸರು ವರ್ಷಗಳ ಹಿಂದೆ ಈ ಫೋಟೋಗೆ ಶೀರ್ಷಿಕೆ ನೀಡಿದ್ದರು,
1861 ರಲ್ಲಿ ದೆಹಲಿ ಪೋಲೀಸರು ದಾಖಲಿಸಿರುವ ಎಫ್​ಐಆರ್​ ಪ್ರತಿ ಇದಾಗಿದೆ. ಬೆಲೆಕಟ್ಟಲಾಗದ ಹಾಗೂ ಅಮೂಲ್ಯ ಮಾಹಿತಿ ಇದಾಗಿದೆ ಎಂದು ಆಜಾದ್​​ ಟ್ವಿಟರ್​ನಲ್ಲಿ ಶೀರ್ಷಿಕೆ ನೀಡಿದ್ದಾರೆ.

ದಿನಾಂಕ 18-10-1861ರಲ್ಲಿ ಪಾತ್ರೆಗಳು ಹಾಗೂ ಹುಕ್ಕಾ ಕಳ್ಳತನ ಪ್ರಕರಣ ಸಂಬಂಧ ದೆಹಲಿ ಪೊಲೀಸರು ದಾಖಲಿಸಿದ ಮೊಟ್ಟ ಮೊದಲ ಎಫ್​ಐಆರ್​ ಪ್ರತಿ ಎಂದು ಈ ಫೋಟೋದ ಮೇಲೆ ಬರೆಯಲಾಗಿದೆ.

— Yashovardhan Azad (@yashoazad) October 22, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...