
ಥಿಂಕ್ ಟ್ಯಾಂಕ್ ಹಾಗೂ ಸ್ಟ್ರಾಟೆಜಿಕ್ ಕನ್ಸಲ್ಟೆನ್ಸಿ ಡೀಪ್ ಸ್ಟ್ರಾಟ್ ಚೇರ್ ಮನ್ ಯಶೋವರ್ಧನ್ ಆಜಾದ್ ಟ್ವಿಟರ್ನಲ್ಲಿ ಈ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋವನ್ನು 2017ರಲ್ಲಿ ದೆಹಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದರು.
ದೆಹಲಿ ಪೊಲೀಸ್ ಇಲಾಖೆಯ ಇತಿಹಾಸದ ಅಪರೂಪದ ಕ್ಷಣಗಳು ಎಂದು ದೆಹಲಿ ಪೊಲೀಸರು ವರ್ಷಗಳ ಹಿಂದೆ ಈ ಫೋಟೋಗೆ ಶೀರ್ಷಿಕೆ ನೀಡಿದ್ದರು,
1861 ರಲ್ಲಿ ದೆಹಲಿ ಪೋಲೀಸರು ದಾಖಲಿಸಿರುವ ಎಫ್ಐಆರ್ ಪ್ರತಿ ಇದಾಗಿದೆ. ಬೆಲೆಕಟ್ಟಲಾಗದ ಹಾಗೂ ಅಮೂಲ್ಯ ಮಾಹಿತಿ ಇದಾಗಿದೆ ಎಂದು ಆಜಾದ್ ಟ್ವಿಟರ್ನಲ್ಲಿ ಶೀರ್ಷಿಕೆ ನೀಡಿದ್ದಾರೆ.
ದಿನಾಂಕ 18-10-1861ರಲ್ಲಿ ಪಾತ್ರೆಗಳು ಹಾಗೂ ಹುಕ್ಕಾ ಕಳ್ಳತನ ಪ್ರಕರಣ ಸಂಬಂಧ ದೆಹಲಿ ಪೊಲೀಸರು ದಾಖಲಿಸಿದ ಮೊಟ್ಟ ಮೊದಲ ಎಫ್ಐಆರ್ ಪ್ರತಿ ಎಂದು ಈ ಫೋಟೋದ ಮೇಲೆ ಬರೆಯಲಾಗಿದೆ.