alex Certify ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 : ಹೊಸ ವಿದ್ಯಾರ್ಥಿಗಳ ನೋಂದಣಿಗೆ ಶಿಕ್ಷಣ ಇಲಾಖೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 : ಹೊಸ ವಿದ್ಯಾರ್ಥಿಗಳ ನೋಂದಣಿಗೆ ಶಿಕ್ಷಣ ಇಲಾಖೆ ಆದೇಶ

ಬೆಂಗಳೂರು : ಮಾರ್ಚ್-2024 ರಲ್ಲಿ ನಡೆಯುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ಕ್ಕೆ ಹೊಸ (REGULAR) ವಿದ್ಯಾರ್ಥಿಗಳ ನೋಂದಣಿ ಮಾಹಿತಿಗಳನ್ನು ಮಂಡಲಿಯ ಜಾಲತಾಣದ PU EXAM PORTAL ಲಾಗಿನ್ ನಲ್ಲಿ ಅಪ್ಲೋಡ್ ಮಾಡುವ  ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಸರ್ಕಾರದ ಆದೇಶ ಸಂಖ್ಯೆ: ಇಪಿ.203.ಎಸ್.ಎಲ್.ಬಿ. 2023 ದಿನಾಂಕ:21-09-2023 ರನ್ವಯ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ವತಿಯಿಂದ 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ದ್ವಿತೀಯ ಪರೀಕ್ಷೆಗಳನ್ನು ವಾರ್ಷಿಕ ಪರೀಕ್ಷೆ-1, ವಾರ್ಷಿಕ ಪರೀಕ್ಷೆ-2 ಮತ್ತು ವಾರ್ಷಿಕ ಪರೀಕ್ಷೆ- ಎಂಬ ಹೆಸರಿನಲ್ಲಿ ನಡೆಸಲಾಗುವುದು.

ಮಾರ್ಚ್-2024 ರಲ್ಲಿ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ-1 ಕ್ಕೆ ಅರ್ಹ ಹೊಸ ವಿದ್ಯಾರ್ಥಿಗಳ (REGULAR) ನೋಂದಣಿ ಮಾಹಿತಿಗಳನ್ನು ಮಂಡಲಿಯ ಜಾಲತಾಣದ (https://kseab.karnataka.gov.in) PU EXAM PORTAL ಲಾಗಿನ್‌ನಲ್ಲಿ ಪಡೆಯಲು ಯೋಜಿಸಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜಿನ ಮಾರ್ಚ್-2024 ರ ದ್ವಿತೀಯ ಪಿಯುಸಿ ಪರೀಕ್ಷೆ-1 ನ್ನು ತೆಗೆದುಕೊಳ್ಳುವ ಹೊಸ ವಿದ್ಯಾರ್ಥಿಗಳ ವಿವರಗಳನ್ನು ಕಡ್ಡಾಯವಾಗಿ ಆನೈನ್ ಮೂಲಕ ಅಪ್ಲೋಡ್ ಮಾಡುವಂತೆ ಈ ಮೂಲಕ ಆದೇಶಿಸಿದೆ.

1) ಈ ನೋಂದಣಿ ಕಾರ್ಯಕ್ಕೆ ದಿನಾಂಕ: 03-11-2023 ರಿಂದ 21-11-2023 ರವರೆಗೆ ಮಾಹಿತಿಯನ್ನು ಅಪ್ಲೋಡ್ ಮಾಡಲು ಕಾಲಾವಕಾಶವನ್ನು ನಿಗದಿಪಡಿಸಲಾಗಿದೆ.

2) ಮಾಹಿತಿಗಳನ್ನು ಮಂಡಲಿಯ ಜಾಲತಾಣದ https://kseab.karnataka.gov.in ರಲ್ಲಿನ PU EXAM PORTAL ಕಾಲೇಜು ಲಾಗಿನ್ ಮುಖಾಂತರ ಅಪ್ಲೋಡ್ ಮಾಡುವುದು.

3) ಪ್ರಾಂಶುಪಾಲರು ಮಂಡಲಿಯ ಕಾಲೇಜು ಲಾಗಿನ್ ನಲ್ಲಿ ಈಗಾಗಲೇ ಸೃಜಿಸಲಾಗಿರುವ Username and Password ಬಳಸಿ ONLINE ನೋಂದಣಿ ಕಾರ್ಯ ಮಾಡಬಹುದಾಗಿದೆ.

4) ನೋಂದಣಿ ಕಾರ್ಯವನ್ನು ವಿದ್ಯಾರ್ಥಿಗಳ SATS NUMBER ಬಳಸಿ ಮಾಡುವುದು.

5) ONLINE ಡೇಟಾ ಎಂಟ್ರಿ ಪ್ರಾರಂಭಿಸುವ ಮೊದಲು ಕಾಲೇಜಿನ ಪ್ರತಿ ವಿದ್ಯಾರ್ಥಿಯ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ ಭಾವಚಿತ್ರ (20-80kb) |peg, format ನಲ್ಲಿ ಅವರ SATS ನೋಂದಣಿ ಸಂಖ್ಯೆಯ ಅನುಕ್ರಮದಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು.

ಉದಾ: ಅಭ್ಯರ್ಥಿಯ SATS ಸಂಖ್ಯೆಯು 12345678 ಆಗಿದ್ದಲ್ಲಿ ಭಾವಚಿತ್ರವನ್ನು ಸ್ಕ್ಯಾನ್ ಮಾಡಿ P12345678 ಎಂದು soft copy ಗಳನ್ನು ಸೇವ್ ಮಾಡಿಟ್ಟುಕೊಳ್ಳುವುದು,

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...