
ಆದಾಗ್ಯೂ, ಮಾನವರು ತಮ್ಮ ಸ್ವಂತ ಲಾಭಕ್ಕಾಗಿ ಆವರಣಗಳಲ್ಲಿ ಅಥವಾ ಸರ್ಕಸ್‌ಗಳಲ್ಲಿ ಅನೇಕ ಜಾತಿ ಪ್ರಾಣಿ, ಪಕ್ಷಿಗಳನ್ನು ಬಂಧಿಸಿ ಇಡುತ್ತಾರೆ. ಕೆಲವೊಮ್ಮೆ ಇವುಗಳನ್ನು ಕಠಿಣವಾಗಿ ನಡೆಸಿಕೊಳ್ಳಲಾಗುತ್ತದೆ ಮತ್ತು ತಂತ್ರಗಳನ್ನು ತೋರಿಸಲು ತರಬೇತಿ ನೀಡಲಾಗುತ್ತದೆ. ಕೆಲವೊಮ್ಮೆ ಅವುಗಳಿಗೆ ಸರಿಯಾಗಿ ಊಟವೂ ನೀಡುವುದಿಲ್ಲ.
ಆದರೆ ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಬಹುಕಾಲದ ವರೆಗೆ ಕೂಡಿ ಹಾಕಿಟ್ಟ ಪ್ರಾಣಿ-ಪಕ್ಷಿಗಳನ್ನು ಗೂಡಿನಿಂದ ಬಿಟ್ಟಾಗ ಅವುಗಳ ಸ್ವಾತಂತ್ರ್ಯವನ್ನು ಹೇಗೆ ಸವಿಯುತ್ತದೆ ಎನ್ನುವ ಕ್ಯೂಟ್ ವಿಡಿಯೋ ಇದಾಗಿದೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿರುವ ಈ ವಿಡಿಯೋ ಹೃದಯಸ್ಪರ್ಶಿಯಾಗಿದೆ. ಹಲವಾರು ಪ್ರಾಣಿ, ಪಕ್ಷಿಗಳು ಬಂಧಮುಕ್ತಗೊಂಡ ನಂತರ ಖುಷಿಪಡುವುದನ್ನು ಅವುಗಳ ಮುಖಗಳಿಂದಲೇ ಕಂಡುಕೊಳ್ಳಬಹುದಾಗಿದೆ.