ಭೂಮಿಯ ಮೇಲೆ ಅಸ್ತಿತ್ವದಲ್ಲಿರುವ ಮಾರಣಾಂತಿಕ ಸರೀಸೃಪಗಳಲ್ಲಿ ಹಾವು ಕೂಡ ಒಂದು. ಎಲ್ಲಾ ಹಾವುಗಳು ಮಾರಣಾಂತಿಕ ಅಲ್ಲದಿದ್ದರೂ ಹಾವು ಎಂಬ ಹೆಸರು ಕೇಳಿದಾಕ್ಷಣ ಬೆಚ್ಚಿ ಬೀಳುವವರು ಇದ್ದಾರೆ.
ಈ ಹಾವುಗಳಲ್ಲಿ ಒಂದು ಹಸಿರು ಹಾವು. ನೋಡಲು ಬಲು ಸುಂದರವಾಗಿದ್ದು, ನೋಡುಗರನ್ನು ಸೆಳೆಯುವ ಹಾವುಗಳಲ್ಲಿ ಹಸಿರು ಹಾವು ಕೂಡ ಒಂದು.
ಹಲವು ರೀತಿಯ ಹಸಿರು ಹಾವುಗಳಿದ್ದು, ಅವುಗಳಲ್ಲಿ ಒಂದನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಪರ್ವೀನ್ ಕಸ್ವಾನ್ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಮನೆಯ ಸಮೀಪ ಬಂದಿರುವ ಈ ಹಾವಿನ ಚಿತ್ರವನ್ನು ಕ್ಲಿಕ್ ಮಾಡಿ ಪೋಸ್ಟ್ ಮಾಡಿರುವ ಅವರು, ಈ ಹಾವಿನ ಜಾತಿಯನ್ನು ಊಹಿಸಬಲ್ಲಿರಾ ಎಂದು ಪ್ರಶ್ನಿಸಿದ್ದಾರೆ.
ವರದಿಯ ಪ್ರಕಾರ, ಐಎಫ್ಎಸ್ ಅಧಿಕಾರಿ ಹಂಚಿಕೊಂಡ ಚಿತ್ರದಲ್ಲಿ ತೋರಿಸಿರುವ ಹಾವಿನ ಜಾತಿಯು ಬಹುಶಃ ಟ್ರಿಮೆರೆಸುರಸ್ ಅಲ್ಬೋಲಾಬ್ರಿಸ್ ಆಗಿದೆ. ಹಾವಿನ ಬಗ್ಗೆ ಅರಿವಿದ್ದವರು ಈ ಹೆಸರನ್ನು ಉಲ್ಲೇಖಿಸುತ್ತಿದ್ದಾರೆ. ಇದು ವೈಟ್ ಲೀಪ್ ಪಿಟ್ ವೈಪರ್ ಜಾತಿಗೆ ಸೇರಿದೆ. ಅನಿಮಾಲಿಯಾ ವೆಬ್ಸೈಟ್ನ ಪ್ರಕಾರ, ವೈಪರ್ ಹಾವಿನ ತಲೆಯ ಬದಿಯಲ್ಲಿ ಹಳದಿ, ಬಿಳಿ ಅಥವಾ ತೆಳು ಹಸಿರು ಬಣ್ಣದ ಮೇಲೆ ಹಸಿರು ಬಣ್ಣದ್ದಾಗಿದೆ. ಈ ಜಾತಿಗಳ ಹಾವುಗಳು ಸಾಮಾನ್ಯವಾಗಿ ಹಸಿರು ಬಣ್ಣದ್ದಾಗಿರುತ್ತದೆ.