
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಈ ನಿರಾಶ್ರಿತ ವ್ಯಕ್ತಿಯ ನಿಸ್ವಾರ್ಥ ಸೇವೆಯ ಕುರಿತಾದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ, ನಿರ್ಗತಿಕ ವ್ಯಕ್ತಿ ಅಂಗಡಿಯ ಶಟರ್ ಮುಂದೆ ಮಲಗಿರುವುದನ್ನು ಕಾಣಬಹುದು. ಈತ ತನ್ನ ಚಿಕ್ಕ ಹಾಸಿಗೆಯನ್ನು ಸರಿಸುಮಾರು ಏಳು ಬೀದಿನಾಯಿಗಳೊಂದಿಗೆ ಹಂಚಿಕೊಳ್ಳುವುದನ್ನು ಚಿತ್ರದಲ್ಲಿ ಕಾಣಬಹುದು. ನಾಯಿಗಳಿಗೆ ಮಳೆ ತಾಗದಿರಲಿ ಎನ್ನುವ ಕಾರಣಕ್ಕೆ ಅವುಗಳಿಗೆ ಛತ್ರಿಯನ್ನು ತೆರೆದಿರುತ್ತಾನೆ. ಇದು ಹೆಚ್ಚು ಹೃದಯಸ್ಪರ್ಶಿಯಾಗಿದೆ.
“ನಮ್ಮ ಹೃದಯವು ಈ ದೊಡ್ಡ ಪ್ರಪಂಚವನ್ನು ಸರಿಹೊಂದಿಸಲು ಸಾಕಷ್ಟು ದೊಡ್ಡದಾಗಿರಬೇಕು” ಎಂದು ಅಧಿಕಾರಿ ಶೀರ್ಷಿಕೆ ಕೊಟ್ಟಿದ್ದು, ಫೋಟೋ ನೋಡಿ ಕಣ್ತುಂಬಿ ಬರುವಂತಿದೆ. “ಈತನದ್ದು 24-ಕ್ಯಾರೆಟ್ ಚಿನ್ನದ ಹೃದಯ” ಎಂದು ಹಲವರು ಹೇಳಿದ್ದಾರೆ.