alex Certify Viral Video | ವಾಹನ ಸವಾರರಿಗೆ ಗಂಭೀರ ಸಂದೇಶ ಸಾರುತ್ತಿದೆ ಮರಿಗಳನ್ನು ರಸ್ತೆ ದಾಟಿಸುತ್ತಿರುವ ಹುಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ವಾಹನ ಸವಾರರಿಗೆ ಗಂಭೀರ ಸಂದೇಶ ಸಾರುತ್ತಿದೆ ಮರಿಗಳನ್ನು ರಸ್ತೆ ದಾಟಿಸುತ್ತಿರುವ ಹುಲಿ

ರಾತ್ರಿ ವೇಳೆ ಕಾಡು ಪ್ರಾಣಿಗಳಿಗೆ ವಾಹನಗಳು ಗುದ್ದಿ ಅವುಗಳ ಸಾವಿಗೆ ಕಾರಣವಾದ ಸುದ್ದಿಗಳು ಪ್ರತಿನಿತ್ಯ ಬರುತ್ತಲೇ ಇರುತ್ತವೆ ಎನ್ನುವಷ್ಟು ಸಾಮಾನ್ಯವಾಗಿವೆ.

ದಟ್ಟ ಅರಣ್ಯಗಳ ನಡುವೆ ಹಾದು ಹೋಗುವ ರಸ್ತೆಗಳಲ್ಲಿ ಸಂಚಾರ ಮಾಡುವಾಗಲೂ ಸಹ ಚಾಲಕರ ನಿರ್ಲಕ್ಷ್ಯ ಚಾಲನೆಯ ಕಾರಣದಿಂದ ಹೀಗೆ ಕಾಡು ಪ್ರಾಣಿಗಳು ಜೀವ ತೆರುವಂತಾಗಿದೆ.

ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ವಿಡಿಯೋವೊಂದನ್ನು ಶೇರ್‌ ಮಾಡಿ, ಕಾಡಿನ ಮೂಲಕ ಹಾದು ಹೋಗುವ ರಸ್ತೆಗಳಲ್ಲಿ ಅತಿ ವೇಗದಲ್ಲಿ ಚಾಲನೆ ಮಾಡುವುದು ಏನೆಲ್ಲಾ ಅನಾಹುತಗಳಿಗೆ ದಾರಿ ಮಾಡಿಕೊಡಬಹುದು ಎಂಬ ಅಂದಾಜು ನೀಡಲು ಯತ್ನಿಸಿದ್ದಾರೆ.

ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ಪನ್ನಾ-ಕಾಟ್ನಿ ರಸ್ತೆಯಲ್ಲಿ ಹುಲಿ ಹಾಗೂ ಅದರ ಮರಿಗಳು ರಸ್ತೆ ದಾಟುತ್ತಿರುವ ವಿಡಿಯೋ ಇದಾಗಿದೆ. ಮಧ್ಯ ಪ್ರದೇಶದ ಉತ್ತರದಲ್ಲಿರುವ ವಿಂಧ್ಯಾ ಪರ್ವತಗಳ ಮೇಲಿರುವ ಪನ್ನಾ ಹುಲಿ ಸಂರಕ್ಷಿತ ಧಾಮದ ನಡುವೆ ಹೋಗುವ ರಸ್ತೆಯೊಂದನ್ನು ದಾಟುತ್ತಿದ್ದ ಹುಲಿ ಹಾಗೂ ಮರಿಗಳನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಹುಲಿಯ ಕುಟುಂಬವು ರಸ್ತೆಯನ್ನು ಸುರಕ್ಷಿತವಾಗಿ ದಾಟಿದೆ. ಆದರೆ ಇಂಥ ಅನೇಕ ನಿದರ್ಶನಗಳಲ್ಲಿ ಪ್ರಾಣಿಗಳ ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುವ ಕಾರಣ ಅರಣ್ಯದ ನಡುವೆ ಹಾದು ಹೋಗುವ ರಸ್ತೆಗಳಲ್ಲಿ ನಿಧಾನವಾಗಿ, ಸುರಕ್ಷಿತವಾಗಿ ಚಾಲನೆ ಮಾಡಲು ವನ್ಯಜೀವಿ ಇಲಾಖೆಗಳು ಜನರಲ್ಲಿ ವಿನಂತಿಸಿಕೊಳ್ಳುತ್ತಲೇ ಇರುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...