ಟೊಮ್ಯಾಟೊ ಅಡುಗೆ ಮನೆಯ ರಾಣಿ. ಈ ಕೆಂಪು ಸುಂದರಿ ಇಲ್ಲದಿದ್ದರೆ ಅಡುಗೆ ಅಪೂರ್ಣ. ರುಚಿಗೆ ಮಾತ್ರವಲ್ಲ, ತ್ವಚೆಗೂ ಟೊಮ್ಯಾಟೊ ಅತ್ಯುತ್ತಮ ಅಮೃತ.
ಸನ್ ಬರ್ನ್ ತೆಗೆಯುವುದಲ್ಲದೇ ಮುಖದಲ್ಲಿನ ಪೋರ್ಸ್ ಮುಚ್ಚುತ್ತದೆ. ಇಳಿ ಬಿದ್ದ ತ್ವಚೆಗೆ ಬಿಗಿ ನೀಡಿ ತ್ವಚೆಯನ್ನು ತಾಜಾತನದಿಂದ ಇಡುತ್ತದೆ. ಮುಖ್ಯವಾಗಿ ಟೊಮ್ಯಾಟೊದಲ್ಲಿರುವ ಲೈಕೊಪೀನ್ ಅಂಶ ಮುಖದ ಕಾಂತಿ ವೃದ್ಧಿಸುತ್ತದೆ. ಹಾಗಾದ್ರೆ ಟೊಮ್ಯಾಟೊ ಬಳಸಿ ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವು ಫೇಸ್ಪ್ಯಾಕ್ಗಳನ್ನು ನೋಡೋಣ ಬನ್ನಿ.
ಒಂದು ಟೊಮ್ಯಾಟೋ ಹಣ್ಣಿನ ಪ್ಯೂರಿ, 2 ಟೇಬಲ್ ಸ್ಪೂನ್ನಷ್ಟು ಪರಂಗಿ ಹಣ್ಣು, ಅರ್ಧ ಟೇಬಲ್ ಸ್ಪೂನ್ ಜೇನುತುಪ್ಪದ ಫೇಸ್ ಪ್ಯಾಕ್ ದಿಢೀರ್ ಗ್ಲೋ ನೀಡುತ್ತದೆ.
2 ಟೇಬಲ್ ಸ್ಪೂನ್ ಮುಲ್ತಾನ್ ಮಿಟ್ಟಿ, ಒಂದು ಟೊಮ್ಯಾಟೊ ಹಣ್ಣಿನ ಜ್ಯೂಸ್, ಸ್ವಲ್ಪ ಹಾಲು ಸೇರಿಸಿ ಮಿಕ್ಸ್ ಮಾಡಿದ್ರೆ ಫೇಸ್ಪ್ಯಾಕ್ ರೆಡಿ. ಕಾಂತಿ ರಹಿತ ತ್ವಚೆಗೆ ಮೈಕಾಂತಿ ತುಂಬುತ್ತದೆ.
ಅರ್ಧ ಬಾಳೆಹಣ್ಣು, 1 ಟೊಮ್ಯಾಟೊ ಹಣ್ಣಿನ ರಸ. ಅರ್ಧ ಟೇಬಲ್ ಸ್ಪೂನ್ ಆಲಿವ್ ಆಯುಲ್ ಫೇಸ್ಪ್ಯಾಕ್ ಡ್ರೈ ಸ್ಕಿನ್ ನಿವಾರಿಸುತ್ತದೆ.
ಅರ್ಧ ಕಪ್ ಓಟ್ ಮೀಲ್ ಅನ್ನು ಪುಡಿ ಮಾಡಿಕೊಳ್ಳಿ. ಇದಕ್ಕೆ 1 ಟೊಮ್ಯಾಟೊ ಹಣ್ಣಿನ ರಸ, ಅರ್ಧ ಸೌತೆಕಾಯಿ ಸೇರಿಸಿ ಫೇಸ್ಪ್ಯಾಕ್ ಮಾಡಿ ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿದ್ರೆ ಆಯಿಲ್ ಸ್ಕಿನ್ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಅಲೊವೆರಾ ಜೆಲ್ ಮತ್ತು ಸ್ವಲ್ಪ ಟೊಮ್ಯಾಟೊ ರಸ ಸೇರಿಸಿ ಫೇಸ್ಪ್ಯಾಕ್ ಹಚ್ಚಿಕೊಂಡರೆ ಸಾಫ್ಟ್ ಸ್ಕಿನ್ ನಿಮ್ಮದಾಗುತ್ತದೆ. ಹಣ್ಣಾದ ಒಂದು ಟೊಮ್ಯಾಟೊ ಹಣ್ಣಿನ ರಸವನ್ನು ಮುಖಕ್ಕೆ ಹಚ್ಚಿಕೊಂಡು 10 ನಿಮಿಷಗಳ ಬಳಿಕ ಮುಖ ತೊಳೆದುಕೊಂಡರೆ ಟ್ಯಾನ್ ಸಮಸ್ಯೆ ನಿವಾರಣೆಯಾಗುತ್ತದೆ.
2 ಟೇಬಲ್ ಸ್ಪೂನ್ ಸಕ್ಕರೆ, 1 ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 1 ಟೊಮ್ಯಾಟೊ ಹಣ್ಣಿನ ರಸ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಬ್ಲ್ಯಾಕ್ಹೆಡ್ಸ್ ಮುಕ್ತ ತ್ವಚೆ ನಿಮ್ಮದಾಗುತ್ತದೆ.