ಪ್ರತಿಯೊಬ್ಬರೂ ಮಲಗುವ ವಿಧಾನ ಬೇರೆ ಬೇರೆಯಿರುತ್ತದೆ. ಆದ್ರೆ ನಾವು ಮಲಗುವ ವಿಧಾನ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಅನೇಕರು ಹೊಟ್ಟೆಯನ್ನು ಅಡಿ ಹಾಕಿ (ಕವುಚಿ) ಮಲಗುತ್ತಾರೆ. ಆದ್ರೆ ಈ ರೀತಿ ಮಲಗುವುದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನೀವೂ ಕವುಚಿ ಮಲಗುವವರಾಗಿದ್ದರೆ ಇಂದಿನಿಂದಲೇ ಈ ವಿಧಾನವನ್ನು ಬದಲಿಸಿಕೊಳ್ಳಿ.
ಹೊಟ್ಟೆ ಕೆಳಗೆ ಹಾಕಿ ಮಲಗುವುದ್ರಿಂದ ತಲೆನೋವಿನ ಸಮಸ್ಯೆ ಕಾಡುತ್ತದೆ. ಕವುಚಿ ಮಲಗಿದ್ರೆ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಕುತ್ತಿಗೆಯಿಂದ ಸೂಕ್ತ ಪ್ರಮಾಣದಲ್ಲಿ ರಕ್ತ ತಲೆಗೆ ಸರಬರಾಜಾಗುವುದಿಲ್ಲ. ಇದ್ರಿಂದ ತಲೆನೋವು ಕಾಣಿಸಿಕೊಳ್ಳುತ್ತದೆ.
ಕವುಚಿ ಮಲಗುವುದ್ರಿಂದ ದೇಹಕ್ಕೆ ಸರಿಯಾಗಿ ಆಮ್ಲಜನಕ ಸಿಗುವುದಿಲ್ಲ. ಇದ್ರಿಂದ ಹಾಸಿಗೆಯಲ್ಲಿರುವ ಬ್ಯಾಕ್ಟೀರಿಯಾಗಳು ದೇಹವನ್ನು ಸೇರುತ್ತವೆ. ಚರ್ಮದ ಸಮಸ್ಯೆ, ಮೊಡವೆ ಸಮಸ್ಯೆ ಕಾಡುತ್ತದೆ.
ಕರುಳಿನ ಸಮಸ್ಯೆಗೂ ನೀವು ಮಲಗುವ ವಿಧಾನವೇ ಮೂಲ. ಕವುಚಿ ಮಲಗುವುದ್ರಿಂದ ತಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದ್ರಿಂದ ಹೊಟ್ಟೆಯ ಸಮಸ್ಯೆ ಕಾಡಲು ಶುರುವಾಗುತ್ತದೆ. ಹೊಟ್ಟೆ ನೋವಿನ ತೊಂದರೆ ಕೂಡ ಕಾಡುತ್ತದೆ.
ಹೊಟ್ಟೆಯನ್ನು ಕೆಳಗೆ ಹಾಕಿ ಮಲಗಿದ್ರೆ ಮೂಳೆ ನೋವು ಕಾಡುವ ಸಾಧ್ಯತೆ ಹೆಚ್ಚಿರುತ್ತದೆ. ಬೆನ್ನು ನೋವು ಬರುವ ಸಂಭವವೂ ಹೆಚ್ಚಿರುತ್ತದೆ. ಸರಿಯಾಗಿ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ.