alex Certify ಸ್ಪ್ರಿಂಗ್ ಆನಿಯನ್ ಪ್ರಯೋಜನ ತಿಳಿದರೆ ನಿತ್ಯವೂ ಸೇವಿಸ್ತೀರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪ್ರಿಂಗ್ ಆನಿಯನ್ ಪ್ರಯೋಜನ ತಿಳಿದರೆ ನಿತ್ಯವೂ ಸೇವಿಸ್ತೀರಾ

ಈರುಳ್ಳಿ ಇಲ್ಲದೆ ಹೋದರೆ ಅಡುಗೆ ಸಂಪೂರ್ಣವಾಗುವುದಿಲ್ಲ. ಹಾಗೇ ಈರುಳ್ಳಿ ಹೂವನ್ನು ಫ್ರೈಡ್ ರೈಸ್, ಸಲಾಡ್ ಗಳಲ್ಲಿ ಹೆಚ್ಚು ಉಪಯೋಗಿಸುವುದನ್ನು ನೋಡಿದ್ದೇವೆ.

ಅಲಂಕಾರಕ್ಕೆ ಬಳಸುವ ಈ ಸ್ಪ್ರಿಂಗ್ ಆನಿಯನ್ ಪ್ರಯೋಜನ ತಿಳಿದರೆ ನಿತ್ಯವೂ ಇದನ್ನು ಸೇವಿಸುತ್ತೇವೆ.

* ಈರುಳ್ಳಿಗೆ ಹೋಲಿಸಿದರೆ ಕಾಂಡಗಳಲ್ಲಿ ಸಲ್ಫರ್ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ಪ್ರಿಂಗ್ ಆನಿಯನ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ರಕ್ತಹೀನತೆ ನಿಯಂತ್ರಣಕ್ಕೆ ಬರುತ್ತದೆ.

* ಶೀತ, ಕೆಮ್ಮಿನಿಂದ ಬಳಲುವವರು ಸೂಪ್ ನಲ್ಲಿ ಈ ಕಾಂಡಗಳನ್ನು ಸಣ್ಣದಾಗಿ ಕಟ್ ಮಾಡಿ ಹಾಕಿಕೊಂಡರೆ ಸಮಸ್ಯೆಗೆ ಪರಿಹಾರ ಸಿಗುತ್ತದೆ.

* ಹಸಿ ಕಾಂಡಗಳ ರಸವನ್ನು ತೆಗೆದು ಅಷ್ಟೇ ಪ್ರಮಾಣದಲ್ಲಿ ಜೇನುತುಪ್ಪದಲ್ಲಿ ಕಲಸಿ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

* ಸ್ಪ್ರಿಂಗ್ ಆನಿಯನ್ ನಲ್ಲಿರುವ ಪೆಕ್ಟಿನ್ ಅನ್ನುವ ಪದಾರ್ಥ ಕ್ಯಾನ್ಸರ್ ಬರದಂತೆ ತಡೆಯಲು ನೆರವಾಗುತ್ತದೆ.

* ಪೈಲ್ಸ್ ಸಮಸ್ಯೆಯಿಂದ ಬಳಲುವವರು ಮೊಸರಿನಲ್ಲಿ ಸ್ಪ್ರಿಂಗ್ ಈರುಳ್ಳಿಯನ್ನು ಹಾಕಿ ಹಸಿಯಾಗಿ ತಿಂದರೆ ಒಳ್ಳೆಯದು. ಇದರಿಂದ ಪೈಲ್ಸ್ ನಿಂದ ಬರುವ ನೋವು, ಊತ ಕಡಿಮೆಯಾಗುತ್ತದೆ.

* ಇದನ್ನು ಬೇಯಿಸುವಾಗ ಕೆಟ್ಟ ವಾಸನೆ ಬರುತ್ತದೆ ಎನ್ನುವವರು ಸ್ಪ್ರಿಂಗ್ ಆನಿಯನ್ ನನ್ನು ಸೀಫುಡ್ ಗಳಲ್ಲಿ ಬಳಸಿ ಸೇವಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...