ಕೆಲವೊಮ್ಮೆ ಏನೂ ಕೆಲಸ ಮಾಡದೆ ನಾವು ಹಣ ಗಳಿಸಬಹುದು. ಮನೆಯಲ್ಲೇ ಕುಳಿತು ಹಣ ಗಳಿಸಲು ನಿಮಗೊಂದು ಅವಕಾಶವಿದೆ. ಪರ್ಸ್ ನಲ್ಲಿ ಅಥವಾ ಕಪಾಟಿನಲ್ಲಿ ಹಳೆ ನಾಣ್ಯವಿದ್ರೆ ಈಗ್ಲೇ ಹುಡುಕಾಡಿ. 2 ರೂಪಾಯಿ ಹಳೆ ನಾಣ್ಯವಿದ್ರೆ 5 ಲಕ್ಷ ರೂಪಾಯಿವರೆಗೆ ನೀವು ಸುಲಭವಾಗಿ ಗಳಿಸಬಹುದು.
ಅನೇಕರು ಪುರಾತನ ವಸ್ತು, ಹಳೆ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿರುತ್ತಾರೆ. ಅವರು ಇಂಥ ನಾಣ್ಯಗಳಿಗೆ ಹಣ ನೀಡಿ ಖರೀದಿ ಮಾಡ್ತಾರೆ. ಎಲ್ಲಿ ಈ ನಾಣ್ಯಗಳನ್ನು ಮಾರಾಟ ಮಾಡಬೇಕೆಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ. ನೀವು ಈ ನಾಣ್ಯವನ್ನು ಕ್ವಿಕರ್ ನಲ್ಲಿ ಮಾರಾಟ ಮಾಡಬಹುದು.
ಮದುವೆ ದಿನ ಡಾನ್ಸ್ ಮಾಡುತ್ತಾ ಆಯ ತಪ್ಪಿ ಬಿದ್ದ ನವ ಜೋಡಿ
ನಿಮ್ಮ ಬಳಿ 1994, 1995, 1997 ಮತ್ತು 2000 ರ ಸರಣಿಯ 2 ರೂಪಾಯಿ ನಾಣ್ಯವಿದ್ದರೆ 5 ಲಕ್ಷ ರೂಪಾಯಿವರೆಗೆ ಗಳಿಸಬಹುದು. ಕ್ವಿಕರ್ ನಲ್ಲಿ ನೀವು ಲಾಗಿನ್ ಮಾಡಬೇಕು. ನಂತ್ರ 2 ರೂಪಾಯಿ ನಾಣ್ಯದ ಫೋಟೋ ಹಾಕಬೇಕು. ನಂತರ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿಯನ್ನು ನಮೂದಿಸಬೇಕು. ನಿಮ್ಮ ಮಾಹಿತಿಯನ್ನು ವೆಬ್ಸೈಟ್ ಪರಿಶೀಲನೆ ನಡೆಸುತ್ತದೆ.
ವೆಬ್ಸೈಟ್ ಎರಡು ಆಯ್ಕೆ ನೀಡುತ್ತದೆ. ಒಂದು ನೇರವಾಗಿ ನೀವು ಖರೀದಿದಾರರಿಗೆ ಮಾರಾಟ ಮಾಡಬಹುದು. ಇಲ್ಲವೆ ನೀವು ವೆಬ್ಸೈಟ್ ಮೂಲಕ ಕೂಡ ಮಾರಾಟ ಮಾಡಬಹುದು.