ಕೆಲವರಿಗೆ ಚಿಕ್ಕ ಪುಟ್ಟ ವಿಚಾರಕ್ಕೆಲ್ಲ ವಿಪರೀತ ಕೋಪ. ಇನ್ನು ಕೆಲವರು ಎಂಥಾ ಕಷ್ಟದ ಸಂದರ್ಭದಲ್ಲೂ ಸಹನೆ ಕಳೆದುಕೊಳ್ಳುವುದಿಲ್ಲ, ಕೋಪ ಮಾಡಿಕೊಳ್ಳುವುದಿಲ್ಲ. ಕೋಪಕ್ಕೆ ಕಾರಣಗಳು ಹಲವು ಇರಬಹುದು.
ಹಣಕಾಸಿನ ಸಮಸ್ಯೆ, ಕಚೇರಿಯ ಒತ್ತಡ, ಕೌಟುಂಬಿಕ ಭಿನ್ನಾಭಿಪ್ರಾಯ, ಮೋಸ ಮತ್ತು ಪ್ರೀತಿಯಲ್ಲಿ ವೈಫಲ್ಯ ಹೀಗೆ ವಿವಿಧ ಕಾರಣಗಳು ನಮ್ಮಲ್ಲಿ ಕೋಪ ತರಿಸಬಹುದು. ಇದರ ಜೊತೆಗೆ ಕೆಲವೊಂದು ಆಹಾರ ಪದಾರ್ಥಗಳ ಸೇವನೆಯಿಂದ ಕೂಡ ಕೋಪ ಹೆಚ್ಚಾಗುತ್ತದೆ. ಈ ಆಂಗ್ರಿ ಫುಡ್ಸ್ ಯಾವ್ಯಾವುದು ಅನ್ನೋದನ್ನು ನೋಡೋಣ.
ಹೂಕೋಸು: ಹೂಕೋಸು ತಿನ್ನುವುದರಿಂದ, ಎಕ್ಸಾ ಗಾಳಿಯು ನಿಮ್ಮ ದೇಹದಲ್ಲಿ ರೂಪುಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಹೊಟ್ಟೆ ಉಬ್ಬರಿಸಬಹುದು. ಇದು ನಿಮ್ಮ ಕೋಪಕ್ಕೆ ಕಾರಣವಾಗುತ್ತದೆ. ಬ್ರೊಕೊಲಿ ಸೇವನೆಯಿಂದಲೂ ಅದೇ ರೀತಿಯ ಸಮಸ್ಯೆ ಉಂಟಾಗುತ್ತದೆ.
ಡ್ರೈ ಫ್ರೂಟ್ಸ್: ಅನೇಕ ಆರೋಗ್ಯ ತಜ್ಞರು ಡ್ರೈ ಫ್ರೂಟ್ಸ್ ತಿನ್ನುವಂತೆ ಶಿಫಾರಸು ಮಾಡುತ್ತಾರೆ. ಆದರೆ ಅವುಗಳ ಸೇವನೆ ಕೋಪಕ್ಕೆ ಕಾರಣವಾಗಬಹುದು. ಮೊದಲೇ ನೀವು ಕೋಪಿಷ್ಠರಾಗಿದ್ದಲ್ಲಿ ಡ್ರೈ ಫ್ರೂಟ್ಸ್ ತಿನ್ನದಿರುವುದು ಉತ್ತಮ.
ಟೊಮೆಟೊ: ಟೊಮೆಟೊ ಇಲ್ಲದೇ ನಮ್ಮ ತಿನಿಸುಗಳೇ ಅಪೂರ್ಣ. ಪ್ರತಿದಿನದ ಅಡುಗೆಗೆ ಟೊಮೆಟೋ ಬೇಕು. ಆದ್ರೆ ಇದು ದೇಹದಲ್ಲಿ ಶಾಖವನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿ ಕೋಪಗೊಳ್ಳುವಂತೆ ಮಾಡುತ್ತದೆ. ಬೇಗ ಕೋಪ ಬರುವವರು ಟೊಮೇಟೊ ಕಡಿಮೆ ತಿನ್ನಬೇಕು.
ರಸಭರಿತವಾದ ಹಣ್ಣು, ತರಕಾರಿ: ಸೌತೆಕಾಯಿ ಮತ್ತು ಕಲ್ಲಂಗಡಿ ತಿನ್ನುವುದರಿಂದ ನಮ್ಮ ದೇಹವನ್ನು ಹೈಡ್ರೀಕರಿಸಬಹುದು, ಆದರೆ ಇದು ಕೋಪವನ್ನು ಹೆಚ್ಚಿಸಲು ಕಾರಣವಾಗಬಹುದು. ನೀವು ಒತ್ತಡದಲ್ಲಿದ್ದರೆ ಈ ರಸಭರಿತ ಹಣ್ಣುಗಳನ್ನು ತಿನ್ನಬೇಡಿ.
ಬದನೆಕಾಯಿ: ಬದನೆಯಲ್ಲಿ ಹೆಚ್ಚಿನ ಆಮ್ಲೀಯ ಅಂಶವಿದ್ದು ಅದು ನಿಮ್ಮ ಮನಸ್ಸಿನಲ್ಲಿ ಕೋಪವನ್ನು ಉಂಟುಮಾಡುತ್ತದೆ. ಬದನೆಕಾಯಿ ಸೇವನೆಯಿಂದ ಕೋಪ ಜಾಸ್ತಿಯಾಗುತ್ತಿದೆ ಎನಿಸಿದರೆ ಈ ತರಕಾರಿ ತಿನ್ನುವುದನ್ನು ಕಡಿಮೆ ಮಾಡಿ.