ಸೇಬುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ಇದು ಅನೇಕ ಜೀವಸತ್ವಗಳ ಮೂಲವಾಗಿದೆ. ಆದರೆ ಸೇಬು ತಿಂದ ತಕ್ಷಣ ಕೆಲವೊಂದು ಆಹಾರಗಳನ್ನು ಸೇವಿಸಬಾರದು. ಇದರಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅಂತಹ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.
-ಸೇಬು ತಿಂದ ತಕ್ಷಣ ಮೂಲಂಗಿಯನ್ನು ಸೇವಿಸಬಾರದು. ಇದು ಚರ್ಮದ ತೊಂದರೆಗಳಿಗೆ ಕಾರಣವಾಗಬಹುದು. ಹಾಗೂ ಶೀತದ ಸಮಸ್ಯೆ ಕಾಡಬಹುದು.
-ಸೇಬು ತಿಂದ ಬಳಿಕ ನೀರನ್ನು ಕುಡಿಯಬಾರದು. ಇದರಿಂದ ಪಿಹೆಚ್ ಮಟ್ಟ ಹಾನಿಗೊಳಗಾಗಿ ಚರ್ಮದ ಮೇಲೆ ಸುಕ್ಕುಗಳು ಮೂಡುತ್ತವೆ. ಹಾಗೇ ಇದರಿಂದ ಅಜೀರ್ಣ, ಮಲಬದ್ಧತೆ, ಅನಿಲ ಸಮಸ್ಯೆ ಕಾಡುತ್ತದೆ.
-ಸೇಬು ತಿಂದ ಬಳಿಕ ಸಿಟ್ರಸ್ ಹಣ್ಣುಗಳನ್ನು ಸೇವಿಸಬಾರದು. ಸೇಬುವಿನಲ್ಲಿಯೂ ವಿಟಮಿನ್ ಸಿ ಇರುವುದರಿಂದ ದೇಹದಲ್ಲಿ ಸಿಟ್ರಸ್ ಆಮ್ಲ ಹೆಚ್ಚಾಗಿ ಹೊಟ್ಟೆಯಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ.
-ಸೇಬು ತಿಂದ ಕೂಡಲೆ ಉಪ್ಪಿನಕಾಯಿ ಅಥವಾ ನಿಂಬೆ ಹಣ್ಣು ಸೇವಿಸಬೇಡಿ. ಇದು ಅನಿಲ, ಆಮ್ಲೀಯತೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.
-ಸೇಬು ತಿಂದ ಬಳಿಕ ಹಾಲು ಕುಡಿಯಬಾರದು. ಇದರಿಂದ ಹೊಟ್ಟೆ ಹಾಳಾಗುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆಯನ್ನು ಉಂಟುಮಾಡುತ್ತದೆ.