ಸುಖಮಯ ದಾಂಪತ್ಯ ಜೀವನಕ್ಕೆ ಹತ್ತಾರು ಸಲಹೆಗಳನ್ನು ಕೇಳಿರ್ತೀರಾ. ರಸಮಯ ಲೈಂಗಿಕ ಬದುಕು ಕೂಡ ಉತ್ತಮ ದಾಂಪತ್ಯದ ಸೂತ್ರಗಳಲ್ಲೊಂದು. ಹಾಗಾಗಿ ಲೈಂಗಿಕ ಜೀವನದಲ್ಲಿ ಸಮಸ್ಯೆಗಳಾಗದಂತೆ ಕಾಪಾಡಿಕೊಳ್ಳಲು ದಂಪತಿಗಳು ಕೆಲವೊಂದು ಆಹಾರ ಪದಾರ್ಥಗಳ ಸೇವನೆಯನ್ನು ರೂಢಿಸಿಕೊಳ್ಳಬೇಕು.
ಒಣ ಖರ್ಜೂರ ಹಾಗೂ ಹಾಲು ಇವುಗಳಲ್ಲೊಂದು. ಖರ್ಜೂರವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ಲೈಂಗಿಕ ಬದುಕಿಗೆ ಸಂಬಂಧಪಟ್ಟ ಸಮಸ್ಯೆಗಳೆಲ್ಲ ಪರಿಹಾರವಾಗುತ್ತವೆ. ಇದಲ್ಲದೆ ಇನ್ನೂ ಹಲವಾರು ಪ್ರಯೋಜನಗಳು ಕೂಡ ಇವೆ.
ಇವುಗಳ ಸೇವನೆಯಿಂದ ಪುರುಷರಿಗೆ ಮಾತ್ರವಲ್ಲ ಮಹಿಳೆಯರಿಗೂ ಹೆಚ್ಚು ಲಾಭವಿದೆ. ಹಾಲು ಮತ್ತು ಖರ್ಜೂರವನ್ನು ಬೆರೆಸಿ ತಿನ್ನುವುದರಿಂದ ದೈಹಿಕ ದೌರ್ಬಲ್ಯ ಕಡಿಮೆಯಾಗುತ್ತದೆ. ಇದರಿಂದ ದಂಪತಿಗಳ ಜೀವನ ಸಂತೋಷದಿಂದ ಕೂಡಿರುತ್ತದೆ.
ಹಾಲು ಮತ್ತು ಖರ್ಜೂರವನ್ನು ಒಟ್ಟಿಗೆ ಸೇವಿಸುವುದರಿಂದ ನಿಮ್ಮ ಸ್ನಾಯುಗಳು ಬಲಗೊಳ್ಳುತ್ತವೆ. ಜಿಮ್ ಮಾಡುವವರು ಇದನ್ನು ಸೇವಿಸಬೇಕು. ವರ್ಕೌಟ್ ವೇಳೆ ಎನರ್ಜೆಟಿಕ್ ಆಗಿ ಇರಲು ಇದು ಸಹಾಯ ಮಾಡುತ್ತದೆ.
ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಲವರು ಮಲಬದ್ಧತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ನೀವು ಹಾಲು ಮತ್ತು ಖರ್ಜೂರವನ್ನು ತಿಂದರೆ ಮಲಬದ್ಧತೆ ದೂರವಾಗುತ್ತದೆ. ಪುರುಷರ ತ್ರಾಣವನ್ನು ಹೆಚ್ಚಿಸಲು, ಹಾಲಿನೊಂದಿಗೆ ಖರ್ಜೂರವನ್ನು ತಿನ್ನಲು ಸಲಹೆ ನೀಡಲಾಗುತ್ತದೆ.
ಕೆಲವೊಂದು ರೋಗಗಳಿಗೆ ಕೂಡ ಇದು ಉತ್ತಮ ಮದ್ದಾಗಿದೆ. ಸಕ್ಕರೆ ಕಾಯಿಲೆ ಇರುವವರು ಇದರ ಸೇವನೆಯಿಂದ ಪ್ರಯೋಜನ ಪಡೆಯುತ್ತಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ನೀವು ಇದನ್ನು ಸೇವಿಸಬಹುದು.
ರಕ್ತದ ಕೊರತೆಯಿರುವವರಿಗೆ ಕೂಡ ಹಾಲಿನೊಂದಿಗೆ ಖರ್ಜೂರ ಸೇವನೆ ಪ್ರಯೋಜನಕಾರಿಯಾಗಿದೆ. ನಿಯಮಿತವಾಗಿ ಸೇವಿಸಿದರೆ ಫಲಿತಾಂಶ ಚೆನ್ನಾಗಿರುತ್ತದೆ. ಇದಲ್ಲದೆ ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಇದು ಸಹಕಾರಿ.