ಕೂದಲು ಒರಟಾಗುವುದು, ಕೂದಲು ಉದುರುವಿಕೆಯಂತಹ ಸಮಸ್ಯೆಗಳು ಹೆಚ್ಚಾಗಿ ಹೆಣ್ಣು ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತವೆ. ಸಾಮಾನ್ಯವಾಗಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಮುಖ್ಯವಾಗಿ ಕೂದಲನ್ನು ತೊಳೆಯುವಾಗ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಇದರಿಂದಾಗಿ ಕೂದಲು ದುರ್ಬಲಗೊಳ್ಳುತ್ತದೆ.
ದೇಹಕ್ಕೆ ಬಿಸಿ ನೀರಿನ ಸ್ನಾನ ತುಂಬಾ ಒಳ್ಳೆಯದು. ಆದರೆ ತಲೆಸ್ನಾನ ಮಾಡುವಾಗ ಬಿಸಿ ನೀರನ್ನು ಬಳಸುವುದು ಒಳ್ಳೆಯದಲ್ಲ. ಬಿಸಿ ನೀರು ಕೂದಲಿನ ನೆತ್ತಿಯಲ್ಲಿರುವ ನೈಸರ್ಗಿಕ ತೈಲದ ಅಂಶವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ನಿಮ್ಮ ಕೂದಲು ಒಣ ಮತ್ತು ನಿರ್ಜೀವವಾಗಿ ಕಾಣುತ್ತದೆ. ಹಾಗಾಗಿ ನಿಮ್ಮ ಕೂದಲನ್ನು ತೊಳೆಯುವಾಗ ಬೆಚ್ಚಗಿನ ನೀರು ಅಥವಾ ತಣ್ಣೀರು ಬಳಸುವುದು ಉತ್ತಮ.
ಕೂದಲಿನ ಕೊಳೆ ತೆಗೆಯಲು ಹೇರ್ ವಾಶ್ ಮಾಡಲಾಗುತ್ತದೆ. ಕೂದಲನ್ನು ತೊಳೆದ ನಂತ್ರ ಕಂಡಿಷನರ್ ಹಾಕದಿದ್ದರೆ, ಕೂದಲು ಒಣಗಿ ನಿರ್ಜೀವವಾಗುತ್ತದೆ. ಕಂಡಿಷನರ್ ಬಳಕೆ ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ರೇಷ್ಮೆಯನ್ನಾಗಿ ಮಾಡುವುದಲ್ಲದೆ, ಕೂದಲು ಗಂಟು ಗಂಟಾಗದಂತೆ ತಡೆಯುತ್ತದೆ. ನಿಮ್ಮ ಕೂದಲಿಗೆ ತಕ್ಕಂತೆ ಶ್ಯಾಂಪೂ ಬಳಕೆ ಮಾಡಿ. ಆದಷ್ಟು ನೈಸರ್ಗಿಕ ಶ್ಯಾಂಪೂ ಬಳಸಿ ನಿಮ್ಮ ಕೂದಲಿನ ಆರೈಕೆ ಮಾಡಿ.