ಈಗ ಚಳಿಗಾಲದ ಸೀಸನ್ನಲ್ಲಿ ನಾವಿದ್ದೇವೆ. ಈ ಸಮಯದಲ್ಲಿ ಕೆಲವೊಂದು ಹಣ್ಣುಗಳನ್ನ ಸೇವಿಸೋದ್ರಿಂದ ನಮ್ಮ ಆರೊಗ್ಯವನ್ನ ಕಾಪಾಡಿಕೊಳ್ಳೋಕೆ ತುಂಬಾನೇ ಒಳ್ಳೆಯದು. ಅದರಲ್ಲಿ ಒಂದು ಹಣ್ಣು ಅಂದ್ರೆ ಪಪ್ಪಾಯ.
ಪಪ್ಪಾಯ ತನ್ನ ರುಚಿ ಹಾಗೂ ಪೋಷಕಾಂಶಗಳ ಮೂಲಕವೇ ಖ್ಯಾತಿ ಪಡೆದಿದೆ. ಈ ಹಣ್ಣಿನ ವಿಶೇಷತೆ ಅಂದರೆ ವರ್ಷದ ಎಲ್ಲಾ ಕಾಲಗಳಲ್ಲಿಯೂ ಈ ಹಣ್ಣು ತಿನ್ನೋಕೆ ಸಿಗುತ್ತೆ.
ಪಪ್ಪಾಯ ಹಣ್ಣು ಬಹಳ ವಿಧದಲ್ಲಿ ದೇಹದ ಆರೋಗ್ಯವನ್ನ ಸುಧಾರಿಸುವಲ್ಲಿ ಸಹಕಾರಿ. ಉಳಿದ ಹಣ್ಣುಗಳಂತೆಯೇ ಪಪ್ಪಾಯದಲ್ಲಿ ಬೀಜಗಳಿವೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಸಾಮಾನ್ಯವಾಗಿ ಎಲ್ಲರೂ ಪಪ್ಪಾಯ ಬೀಜಗಳನ್ನ ಎಸೆದು ಹಣ್ಣನಷ್ಟೇ ಸೇವನೆ ಮಾಡ್ತಾರೆ. ಆದರೆ ಈ ಪಪ್ಪಾಯ ಬೀಜದಿಂದಲೂ ಎಷ್ಟೊಂದು ಪ್ರಯೋಜನವಿದೆ ಅನ್ನೋದು ನಿಮಗೆ ತಿಳಿದಿದೆಯೇ..? ಪಪ್ಪಾಯ ಬೀಜದಲ್ಲಿ ಫೈಬರ್, ಆಂಟಿ ಒಕ್ಸಿಡೆಂಟ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಅಡಗಿವೆ.
ನೀವು ತೂಕದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮಗೆ ಪಪ್ಪಾಯದ ಬೀಜ ತುಂಬಾನೇ ಸಹಕಾರಿ. ಪಪ್ಪಾಯ ಬೀಜದ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗುತ್ತೆ. ಇದರ ಜೊತೆಯಲ್ಲಿ ಕ್ಯಾನ್ಸರ್ನಂತಹ ಭಯಾನಕ ಕಾಯಿಲೆಗೂ ಪಪ್ಪಾಯ ಹಣ್ಣಿನ ಬೀಜ ರಾಮಬಾಣ. ಹಾಗೂ ಲಿವರ್ನ ಆರೋಗ್ಯವನ್ನ ಕಾಪಾಡೋಕೂ ಬೀಜವನ್ನ ಸೇವಿಸಬಹುದಾಗಿದೆ. ಕಿಡ್ನಿ ಆರೋಗ್ಯವನ್ನ ಕಾಪಾಡುವಲ್ಲಿಯೂ ಇದು ಸಹಕಾರಿ.
ತ್ವಚೆಯ ರಕ್ಷಣೆಗೂ ಪಪ್ಪಾಯ ಬೀಜ ವನ್ನ ಬಳಕೆ ಮಾಡಿಕೊಳ್ಳಬಹುದು. ನಿರಂತರ ಪಪ್ಪಾಯ ಬೀಜದ ಸೇವನೆಯಿಂದ ಮುಖದಲ್ಲಿ ಕಾಂತಿ ಹೆಚ್ಚೋದ್ರ ಜೊತೆಗೆ ಸುಕ್ಕು ಮಾಯವಾಗಲಿದೆ.