ಶಿವ ಅಭಿಷೇಕ ಪ್ರಿಯ. ಹಾಗಾಗಿ ಮಹಾಶಿವರಾತ್ರಿಯಂದು ಶಿವನನ್ನುಈ ಒಂದೇ ಒಂದು ವಸ್ತುವಿನಿಂದ ಅಭಿಷೇಕ ಮಾಡಿದರೆ ಕೋಟಿ ಬಾರಿ ಶಿವಲಿಂಗಕ್ಕೆ ಅಭಿಷೇಕ ಮಾಡಿದ ಪುಣ್ಯ ಪ್ರಾಪ್ತಿಯಾಗುತ್ತದೆ. ಅಂತವರಿಗೆ ಜೀವನದಲ್ಲಿ ಎದುರಾದ ಕಷ್ಟಗಳು ದೂರವಾಗಿ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂದು ಸ್ಕಂದ ಪುರಾಣದಲ್ಲಿ ತಿಳಿಸಲಾಗಿದೆ.
ಶಿವರಾತ್ರಿಯಂದು ಶಿವನಿಗೆ ಪಂಚ ಗವ್ಯಗಳಿಂದ ಅಭಿಷೇಕ ಮಾಡಬೇಕು. ಪಂಚ ಗವ್ಯಗಳೆಂದರೆ ಗೋವಿನಿಂದ ಬರುವಂತಹ ವಸ್ತುಗಳಾದ ಹಾಲು, ಮೊಸರು, ತುಪ್ಪ, ಸಗಣಿ, ಗೋಮೂತ್ರ ಇವುಗಳಿಂದ ಶಿವನಿಗೆ ಅಭಿಷೇಕ ಮಾಡಿ. ಹಾಲನ್ನು ಗಂಗಾ ಸ್ವರೂಪವೆಂದು, ಸಗಣಿಯನ್ನ ಯಮುನಾ ಸ್ವರೂಪವೆಂದು, ಗೋಮೂತ್ರವನ್ನು ನರ್ಮದಾವೆಂದು ಹೇಳಲಾಗುತ್ತದೆ. ಹಾಗಾಗಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಫಲ ಪ್ರಾಪ್ತಿಯಾಗುತ್ತದೆ.
ಹಾಗೇ ಎಳನೀರಿನಿಂದ ಅಭಿಷೇಕ ಮಾಡಿದರೆ ಸಕಲ ಸಂಪತ್ತು ಪ್ರಾಪ್ತಿಯಾಗುತ್ತದೆ. ರುದ್ರಾಕ್ಷಿ ಹಾಕಿದ ನೀರಿನಿಂದ ಅಭಿಷೇಕ ಮಾಡಿದರೆ ಐಶ್ವರ್ಯ ಸಿಗುತ್ತದೆ. ಬಿಲ್ವಪತ್ರೆ ಹಾಕಿದ ಜಲದಿಂದ ಅಭಿಷೇಕ ಮಾಡಿದರೆ ಭೋಗ ಭಾಗ್ಯ ಪ್ರಾಪ್ತಿಯಾಗುತ್ತದೆ. ವಿಭೂತಿ ಮಿಶ್ರಿತ ನೀರಿನಿಂದ ಅಭಿಷೇಕ ಮಾಡಿದರೆ ಮಾನಸಿಕ ನೆಮ್ಮದಿ ದೊರೆಯುತ್ತದೆ.