ಮಹಾರಾಷ್ಟ್ರದ ಶಿವಸೇನೆ ನಾಯಕರು ಹಿಂದುತ್ವ ವಿಚಾರದ ಬಗ್ಗೆ ಮತ್ತೊಮ್ಮೆ ವಾಗ್ದಾಳಿ ನಡೆಸೋಕೆ ಶುರು ಮಾಡಿದ್ದು, ಹುತಾತ್ಮ ದಿನಾಚರಣೆಯಂದು ಇದು ಮುಂದುವರೆದಿದೆ. ನಿಜವಾದ ಹಿಂದುತ್ವವಾದಿ ಯಾರಾದರು ಇದ್ದಿದ್ದರೆ ಜಿನ್ನಾ ಅವರನ್ನ ಗುಂಡಿಕ್ಕಿ ಕೊಲ್ಲುತ್ತಿದ್ದರು ಮಹಾತ್ಮ ಗಾಂಧಿಯನ್ನಲ್ಲ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಭಾನುವಾರ ಹೇಳಿದ್ದಾರೆ.
ಹುತಾತ್ಮ ದಿನಾಚರಣೆಯಂದು ಮಾತನಾಡಿರುವ ಅವರು, ಮುಸ್ಲಿಮರಿಗೆ ಪ್ರತ್ಯೇಕ ರಾಷ್ಟ್ರ ಅಥವಾ ಪಾಕಿಸ್ತಾನದ ಪರಿಕಲ್ಪನೆ ಜಿನ್ನಾ ಅವ್ರದ್ದು. ಪಾಕಿಸ್ತಾನದ ರಚನೆ ಜಿನ್ನಾ ಅವರ ಬೇಡಿಕೆಯಾಗಿತ್ತು, ನಿಜವಾದ ‘ಹಿಂದುತ್ವವಾದಿ’ ಇದ್ದಿದ್ದರೆ, ಜಿನ್ನಾಗೆ ಗುಂಡಿಕ್ಕುತ್ತಿದ್ದರು, ಗಾಂಧಿಯವರಿಗಲ್ಲ. ಅಂತಹ ಕೃತ್ಯವನ್ನ ದೇಶಭಕ್ತಿಯ ಕೃತ್ಯ ಎಂದು ಒಪ್ಪಿಕೊಳ್ಳಬಹುದಿತ್ತು. ಜಗತ್ತು ಇಂದಿಗೂ ಗಾಂಧೀಜಿಯವರ ಸಾವಿಗೆ ಶೋಕ ವ್ಯಕ್ತಪಡಿಸುತ್ತದೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ವಿಡಿಯೋ: ವಿಕಲಚೇತನ ವ್ಯಕ್ತಿಗೆ ರಸ್ತೆ ದಾಟಲು ನೆರವಾದ ಸಂಚಾರಿ ಪೊಲೀಸ್
ಮಹಾತ್ಮ ಗಾಂಧಿಯವರ ಪುಣ್ಯತಿಥಿಯ ಸಲುವಾಗಿ ಅತ್ತ ಗುಜರಾತ್‌ನ ಅಹಮದಾಬಾದ್‌ನಲ್ಲಿ, 2,975 ಮಣ್ಣಿನ ಕುಲ್ಹಾದ್‌ಗಳಿಂದ (ಮಣ್ಣಿನ ಕಪ್‌ಗಳು) ಮಹಾತ್ಮ ಗಾಂಧಿಯವರ ಭವ್ಯ ಗೋಡೆಯ ಭಿತ್ತಿಚಿತ್ರವನ್ನು ರಚಿಸಲಾಗಿದೆ. ಅದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾವರಣಗೊಳಿಸಿದರು. ಜೊತೆಗೆ ತಮ್ಮ ಗಾಂಧಿನಗರ ಲೋಕಸಭಾ ಕ್ಷೇತ್ರದ ಕುಂಬಾರ ಸಮುದಾಯದ ಸದಸ್ಯರಿಗೆ ವಿದ್ಯುತ್ ಮಡಿಕೆ ಚಕ್ರಗಳನ್ನು ವಿತರಿಸಿದರು.